`ಸರಸ್ವತಿ ಸಾಧಕ ಸಿರಿ’ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ, ಜ. 12- ಉಡುಪಿ ಜಿಲ್ಲೆಯ ಸಾಲಿಗ್ರಾಮದ  ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಆಶ್ರಯದಲ್ಲಿ  70ನೇ ವರ್ಷದ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ `ಸರಸ್ವತಿ ಸಾಧಕ ಸಿರಿ’ ರಾಷ್ಟ್ರ ಪ್ರಶಸ್ತಿಗೆ  ವಿವಿಧ ಕ್ಷೇತ್ರಗಳ ಸಾಧಕರ ಒತ್ತಾಯದ ಮೇರೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಲಾಗಿದೆ. 

ಸಾಧಕರಿಗೆ ಸಾಧಕರ ಭಾವಚಿತ್ರವಿರುವ ಸನ್ಮಾನ ಪತ್ರ, ಶಾರದ ಮಾತೆಯ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಗುವುದು ಎಂದು  ಡಾ. ನಾಗೇಶ ಸಂಜೀವ ಕಿಣಿ ಪ್ರಕಟಿಸಿದ್ದಾರೆ. 

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಹಯೋಗದೊಂದಿಗೆ ನಡೆಯಲಿರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಹೆಸರು ನೋಂದಾಯಿಸಲು ಇದೇ ದಿನಾಂಕ 15 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ವಿವಿಧ ಕ್ಷೇತ್ರಗಳ ಸಾಧಕರು 9538732777 ಸಂಪರ್ಕಿಸಬಹುದು ಎಂದು ಸಾಲಿಗ್ರಾಮ ಗಣೇಶ್ ಶೆಣೈ, ಶ್ರೀಪತಿ ರಾಘವೆಂದ್ರ ಶೆಣೈ ವಿನಂತಿಸಿದ್ದಾರೆ.

error: Content is protected !!