ನಗರದ ಪಿಎಸ್‌ಎಸ್‌ಇಎಮ್ಆರ್ ಶಾಲೆಯಲ್ಲಿ ಇಂದು ವಾರ್ಷಿಕೋತ್ಸವ

ತೋಳಹುಣಸೆಯ ಶಿವಗಂಗೋತ್ರಿ ಆವರಣದಲ್ಲಿರುವ ಪಿ.ಎಸ್.ಎಸ್.ಇ..ಎಮ್. ಆರ್. ಶಾಲೆ ಹಾಗೂ ಬಾಪೂಜಿ ಎಸ್.ಪಿ.ಎಸ್.ಎಸ್ ಪಿಯು ಕಾಲೇಜಿನ ವಾರ್ಷಿಕ ಸಾಂಸ್ಕೃತಿಕೋತ್ಸವ ಇಂದು ನಡೆಯಲಿದೆ. 

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಧರ್ಮಸಂಸ್ಥಾಪನೆಗಾಗಿ ವಿಷ್ಣವಿನ ಎಂಟನೇ ಅವತಾರವಾದ ಶ್ರೀ ಕೃಷ್ಣನ ಲೀಲೆಗಳನ್ನು ಬಿಂಬಿಸುವ ಶ್ರೀ ಕೃಷ್ಣ ವೈಭವ ರೂಪಕವನ್ನು ಶಾಲೆಯ ಮಕ್ಕಳು ಅನಾವರಣಗೊಳಸಲಿದ್ದಾರೆ. 

ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರುವ ಭರತನಾಟ್ಯ ಮತ್ತು ಜಾನಪದ ಕಲೆಗಳ ವೈಭವಗಳು ಪ್ರದರ್ಶನಗೊಳ್ಳಲಿವೆ.

ಮುಖ್ಯ ಅತಿಥಿಯಾಗಿ ಮಾಹಿತಿ ತಂತ್ರಜ್ಞಾನ ಮತ್ತು ಪ್ರಮುಖ ಡಿಜಿಟಲ್ ಇನ್ಸಟಿಲ್ಸ್ ಸಹಾಯಕ ಕಾರ್ಯದರ್ಶಿ ಮತ್ತು ಸಿ ಬಿ ಎಸ್ ಇ ಕರ್ನಾಟಕ ವಲಯ ಮಾಹಿತಿ ತಂತ್ರಜ್ಞಾನದ ಅಧಿಕಾರಿ ರಾಹುಲ್ ಸಿಂಗ್ ರಾತೋರೆ ಅವರು ಆಗಮಿಸಲಿದ್ದಾರೆ. 

ಶಾಲೆಯ ಅಧ್ಯಕ್ಷ ಎಸ್.ಎಸ್. ಗಣೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶಾಲೆಯ ಮುಖ್ಯಸ್ಥರಾದ ಮಂಜುನಾಥ, ರಂಗರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 

error: Content is protected !!