ಯರಗುಂಟೆಯಲ್ಲಿ ಇಂದು ವಿಕಲಚೇತನರ ನಡೆ ಸರ್ಕಾರಿ ಶಾಲೆಗಳ ಕಡೆ

ಕರ್ನಾಟಕ ರಾಜ್ಯ ವಿಕಲಚೇತನರ ಆರ್.ಪಿ.ಡಿ. ಟಾಸ್ಟ್ ಪೋರ್ಸ್, ಬೆಂಗಳೂರು (ಸಂಘ ಸಂಸ್ಥೆಗಳ ಒಕ್ಕೂಟ) ಜಿಲ್ಲಾ ಘಟಕ ಮತ್ತು ಮಾನಸ ಸಾಧನಾ ವಿಕಲಚೇತನರ ಸೇವಾ ಟ್ರಸ್ಟ್ ವತಿಯಿಂದ ಮಾನಸ ಸಾಧನ-ವಿಕಲಚೇತನರ ನಡೆ ಸರ್ಕಾರಿ ಶಾಲೆಗಳ ಕಡೆ ಹೆಸರಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಲೇಖನ ಸಾಮಗ್ರಿಗಳು ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಯರಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ವಹಿಸಲಿದ್ದು, ಉದ್ಯಮಿ ಡಿ.ಎಸ್. ಸಿದ್ದಣ್ಣ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುರ್ಚಘಟ್ಟ ಸಾಧನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ ಅಧ್ಯಕ್ಷರಾದ ಡಾ. ಪುಷ್ಪಲತಾ, ಮಾತೃದೇವೋ ಸಮಾಜ ಕಲ್ಯಾಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪೋತಲ್ ಶ್ರೀನಿವಾಸ್, ಮುಖ್ಯ ಶಿಕ್ಷಕರಾದ ರುದ್ರಗೌಡ ಗುಬ್ಬಿ, ದೈಹಿಕ ಶಿಕ್ಷಕರಾದ ಎ. ದೇವೇಂದ್ರಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

error: Content is protected !!