ಇಂದು ಶಿವಗಂಗೋತ್ರಿ ಉತ್ಸವ

ಶ್ರೀ ಕೇದಾರೇಶ್ವರ ಎಜುಕೇಷನ್ ಟ್ರಸ್ಟ್‍ನ ಶಿವಗಂಗೋತ್ರಿ ಪಬ್ಲಿಕ್ ಸ್ಕೂಲ್‍ನಲ್ಲಿ 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ – ಶಿವಗಂಗೋತ್ರಿ ಉತ್ಸವವು ಇಂದು ಸಂಜೆ 4 ಗಂಟೆಗೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ  ನಡೆಯಲಿದೆ.

ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಸ್‍ಆರ್‍ಪಿ ಸಮೂಹ ಸಂಸ್ಥೆ ಸಂಸ್ಥಾಪಕ ತ್ಯಾವಣಿಗಿ ವೀರಭದ್ರಸ್ವಾಮಿ ವಹಿಸುವರು. 

ಮುಖ್ಯ ಅತಿಥಿಗಳಾಗಿ ಸಂತೇಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎನ್. ಮಲ್ಲಯ್ಯ, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಆರ್. ಲಕ್ಷ್ಮಣ, ನಿವೃತ್ತ ಪಿಡಿಓ ಎಂ.ಎಸ್.ವಿರುಪಾಕ್ಷಯ್ಯ, ಎಸಿಎಂ ಸ್ಕೂಲ್‍ನ ಸಂಸ್ಥಾಪಕ ಕಾರ್ಯದರ್ಶಿ ಎಸ್.ಎಂ. ಮಂಜುನಾಥ ಸ್ವಾಮಿ ಆಗಮಿಸಲಿದ್ದಾರೆ.

error: Content is protected !!