ದಾವಣಗೆರೆ, ಜ.8- ವಿಕಲ ಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್ ಚೇರ್‍ಗಳನ್ನು ವಿತರಿಸುವ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವ್ಹೀಲ್‍ಚೇರ್ ಪಡೆಯಲು ಅರ್ಹ ವಿಕಲಚೇತನರು ಸುವಿಧ ವೆಬ್‌ಸೈಟ್ suvidha.karnataka.gov.in ಪೋರ್ಟಲ್ ಮೂಲಕ ಇದೇ ದಿನಾಂಕ 20ರೊಳಗೆ ಅರ್ಜಿ ಸಲ್ಲಿಸ ಬಹುದು. ಮಾಹಿತಿಗಾಗಿ ವಿವಿಧೋ ದ್ಧೇಶ ಪುನರ್ವಸತಿ ಕಾರ್ಯಕ ರ್ತರನ್ನು ಸಂಪರ್ಕಿಸಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ. ಕೆ.ಕೆ ಪ್ರಕಾಶ್ ತಿಳಿಸಿದ್ದಾರೆ.
January 9, 2025