ದಾವಣಗೆರೆ, ಜ. 8- ಭದ್ರಾ ಅಣೆಕಟ್ಟಿನಿಂದ ಭದ್ರಾ ಮೇಲ್ದಂಡೆಗೆ ಈ ವರ್ಷದಲ್ಲಿ ನಾಲ್ಕು ಟಿಎಂಸಿ ನೀರು ಹರಿಸಿದ್ದು, ಈಗಲೂ ಸಹ ವಾಣಿ ವಿಲಾಸ ಸಾಗರ ತುಂಬಿದ್ದರೂ 40 ದಿನಗಳಿಂದ ಪ್ರತಿ ದಿನ 700 ಕ್ಯೂಸೆಕ್ಸ್ ನೀರನ್ನು ಬಿಡುತ್ತಿರುವುದಕ್ಕೆ ಭಾರತೀಯ ರೈತ ಒಕ್ಕೂಟ ವಿರೋಧಿಸಿದೆ.
ಭದ್ರಾ ಅಣೆಕಟ್ಟಿನ ಸಮತೋಲನ ಕಾಯುವ ಅಣೆಕಟ್ಟೆ ಅಲ್ಲ. 1960 ರಲ್ಲಿ ಅಣೆಕಟ್ಟು ನಿರ್ಮಿಸುವಾಗ ಮಧ್ಯ ಕರ್ನಾಟಕ ಬರದಿಂದ ತತ್ತರಿಸಿದೆ ಎಂದು 2,60,000 ಎಕರೆಗೆ ನೀರೋದಗಿಸಬೇಕೆಂದು ಮಾಜಿ ಸಚಿವ ಸಿದ್ಧಪ್ಪ ಕೈಜೋಡಿಸಿದ್ದರು. ಭದ್ರಾ ಅಣೆಕಟ್ಟೆಗೆ ಇನ್ನೂ ನಾಲ್ಕು ಅಡಿ ನೀರು ಕೊರತೆ ಇದೆ. ಭದ್ರಾ ಮೇಲ್ದಂಡೆೆ ಮಳೆಗಾಲದಲ್ಲಿ ನೀರು ಬಿಡಬೇಕೆಂಬ ನಿಯಮ ಗಾಳಿಗೆ ತೂರಿ ನವೆಂಬರ್ ಕೊನೆ ವಾರದಿಂದ ಇಲ್ಲಿಯವರೆಗೆ ನೀರನ್ನು ಬಿಡುತ್ತಿದ್ದೀರಿ. ಕೂಡಲೇ ಸರ್ಕಾರದ ಆದೇಶವನ್ನು ರೈತರ ಹಿತದೃಷ್ಠಿಯಿಂದ ವಾಪಸ್ ಪಡೆಯಬೇಕು ಎಂದು ರೈತ ಒಕ್ಕೂಟದ ಶಾಮನೂರು ಹೆಚ್.ಆರ್ ಲಿಂಗರಾಜ್, ಮಹೇಶ್ ಕುಂದುವಾಡ, ನಾಗರಾಜರಾವ್ ಕೊಂಡಜ್ಜಿ, ಮಾಜಿ ಮೇಯರ್ ಗುರುನಾಥ್ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.