ಜಾನಪದ ನೃತ್ಯ, ಜಾನಪದ ಗೀತೆ ಸ್ಪರ್ಧೆಯಲ್ಲಿ ಮಂಡ್ಯ ಪ್ರಥಮ

ದಾವಣಗೆರೆ, ಜ.6- ನಗರದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಂಡ್ಯ ಜಿಲ್ಲೆಯ ಕಲಾವಿದರು ಜಾನಪದ ನೃತ್ಯ ಮತ್ತು ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.

ಘೋಷಣೆ ಸ್ಪರ್ಧೆ: ಬೆಂಗಳೂರು ನಗರ ಜಿಲ್ಲೆಯ ಚಂದನ್ ಎಂ. ನಾಯ್ಕ ಪ್ರಥಮ ಸ್ಥಾನ, ಚಿಕ್ಕಮಗಳೂರಿನ ವರುಣ್ ಡಿ.ಆರ್ಯ ದ್ವಿತೀಯ ಸ್ಥಾನ, ಹಾಸನದ ದೇಶರಾಜ್ ಪರಿಪೂರ್ಣ ತೃತೀಯ ಸ್ಥಾನ ಪಡೆದಿದ್ದಾರೆ.

ಕವನ ರಚನಾ ಸ್ಫರ್ಧೆ: ಬೆಳಗಾವಿ ಶಾಂಭವಿ ಕುಶಪ್ಪ ತೇರ್ಲಿ ಪ್ರಥಮ, ಹಾಸನದ ಶೃತಿ ಎಸ್. ರಾಜ್ ದ್ವಿತೀಯ, ಉತ್ತರ ಕನ್ನಡದ ಆಸ್ಪಿಯಾ ಇರ್ಶಾದ್ ಅಹಮದ್ ಶೇಖ್ ತೃತೀಯ ಸ್ಥಾನ ಪಡೆದಿದ್ದಾರೆ.

ಚಿತ್ರಕಲಾ ಸ್ಪರ್ಧೆ: ಗದಗ್‌ನ ವಿನುತ ಎನ್ ಅಕ್ಕಸಾಲಿಗ ಪ್ರಥಮ, ದಾವಣಗೆರೆಯ ಕಾರ್ತಿಕ್ ಆಲೂರು ದ್ವಿತೀಯ, ಉತ್ತರ ಕನ್ನಡದ ಪ್ರಶಾಂತ ಬಾರುಗೋಡ ತೃತೀಯ ಸ್ಥಾನ ಪಡೆದಿದ್ದಾರೆ.

ಕಥೆ ಬರೆಯುವ ಸ್ಪರ್ಧೆ: ಹಾಸನದ ತೀರ್ಥ ಪೂವಯ್ಯ ಪ್ರಥಮ, ಚಿಕ್ಕಮಗಳೂರಿನ ಗಗನ್ ಎಸ್‌  ದ್ವಿತೀಯ, ರಾಮನಗರದ ಜಿ.ಕೆ. ರವಿಕುಮಾರ್ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಸ್ತು ಪ್ರದರ್ಶನ: ಬಳ್ಳಾರಿಯ ಹರ್ಷ ಜೆ.ಎನ್ ಮತ್ತು ತಂಡದವರು ಪ್ರಥಮ, ಮಡಿಕೇರಿ ಶ್ವೇತಾನ್ ಜಿ. ರಾಯ್ ದ್ವಿತೀಯ, ದಾವಣಗೆರೆಯ ಜೀವನ ವಿ.ಜೆ ತೃತೀಯ ಸ್ಥಾನ ಪಡೆದುಕೊಂಡರು.

ಜಾನಪದ ಗೀತೆ ಸ್ಪರ್ಧೆ: ಮಂಡ್ಯ ಪ್ರಥಮ, ಬಾಗಲಕೋಟೆ ದ್ವಿತೀಯ, ಚಾಮರಾಜನಗರ ತೃತೀಯ ಸ್ಥಾನವನ್ನು ಪಡೆದಿವೆ.

ಜಾನಪದ ನೃತ್ಯ ಸ್ಪರ್ಧೆ: ಮಂಡ್ಯ ಪ್ರಥಮ, ಉಡುಪಿ ದ್ವಿತೀಯ ಹಾಗೂ ಬಾಗಲಕೋಟೆ ತೃತೀಯ ಸ್ಥಾನ ಪಡೆದವು.

ನಗರದ ಬಿಐಇಟಿ ಕಾಲೇಜಿನ ಆವರಣದಲ್ಲಿನ ಎಸ್‌.ಎಸ್‌. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜನೆಗೊಂಡಿದ್ದ ರಾಜ್ಯಮಟ್ಟದ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. 

error: Content is protected !!