ನಗರಕ್ಕೆ ಇಂದು ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ ನೀಡಲಿದ್ದು, ಬೆಳಿಗ್ಗೆ 10.30 ಕ್ಕೆ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳಲಿದ್ದು. ನಂತರ 11.45 ಕ್ಕೆ ಎಸ್.ಎಂ. ಕೃಷ್ಣ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಮಧ್ಯಾಹ್ನ 12.30 ಕ್ಕೆ ಸಿ.ಜಿ. ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ ಎಂದು ಜಿಲ್ಲಾ ಮಾಧ್ಯಮ ಸಂಚಾಲಕ ವಿಶ್ವಾಸ್ ಹೆಚ್. ಪಿ. ತಿಳಿಸಿದ್ದಾರೆ. ರಾಜ್ಯಾದ್ಯಂತ ಆಗುತ್ತಿರುವ ಬಾಣಂತಿಯರ ಹಾಗೂ ನವಜಾತ ಶಿಶುಗಳ ಸಾವುಗಳ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆದೇಶ ಮೇರೆಗೆ ಬಿಜೆಪಿಯಿಂದ ಆಂದೋ ಲನ ಸಮಿತಿ ಹಾಗೂ ಸತ್ಯ ಶೋಧನಾ ತಂಡವನ್ನು ರಚಿಸಲಾಗಿದೆ.
ಈ ತಂಡವು ರಾಜ್ಯಾದ್ಯಂತ ಸಂಚರಿಸಿ ವರದಿಯನ್ನು ಸಂಗ್ರಹಿಸಲಿದೆ.