ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ಹಾಗೂ ಪಾರಂಪರಿಕ ವೈದ್ಯ ಪರಿಷತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಪಾರಂಪರಿಕ ವೈದ್ಯ ಪರಿಷತ್, ಕರ್ನಾಟಕದ 25ನೇ ಸಂಸ್ಥಾಪನಾ ದಿನಾಚರಣೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದೆ.
ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ವೈದ್ಯ ಶಿವಲಿಂಗಪ್ಪ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪಾರಂಪರಿಕ ವೈದ್ಯ ಪರಿಷತ್‌ನ ಅಧ್ಯಕ್ಷ ವೈದ್ಯ ಜಿ. ಮಹಾದೇವಯ್ಯ, ಮೈಸೂರಿನ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರು ಹಾಗೂ
ಪಾರಂಪರಿಕ ವೈದ್ಯ ಪರಿಷತ್, ಕರ್ನಾಟಕದ ಹಿರಿಯ
ಸಂಸ್ಥಾಪಕರಾದ ಡಾ|| ಸತ್ಯನಾರಾಯಣ ಭಟ್, ಪರಿಷತ್‌ನ ಕೋಶಾಧ್ಯಕ್ಷರಾದ ವೈದ್ಯ ಶಿವಾನಂದ ಜಂಗಿನ ಮಠ, ಸಹಕಾರ್ಯದರ್ಶಿ ವೈದ್ಯ ಉಮಾದೇವಿ, ಕಾರ್ಯಕಾರಿ ಸಮಿತಿ ಸದಸ್ಯ ವೈದ್ಯ ವೀರಣ್ಣ, ಜಿಲ್ಲಾ ಸಂಚಾಲಕರಾದ ವೈದ್ಯ ಕೆ.ಎಂ. ಪುಷ್ಪಲತಾ ಇವರುಗಳು ಆಗಮಿಸಲಿದ್ದಾರೆ ಎಂದು ಪರಿಷತ್‌ನ ಕಾರ್ಯದರ್ಶಿ ಮಮತಾ ನಾಗರಾಜ್ ತಿಳಿಸಿದ್ದಾರೆ.