ಭದ್ರಾ ನಾಲೆಗಳ ಆಧುನೀಕರಣಕ್ಕೆ ಭಾರತೀಯ ರೈತ ಒಕ್ಕೂಟದ ಆಗ್ರಹ

ದಾವಣಗೆೆರೆ, ಜ. 6- ಭದ್ರಾ ನಾಲೆಗಳ ಆಧುನೀಕರಣ ಹಾಗೂ  ಭದ್ರಾ ಅಣೆಕಟ್ಟೆಯಲ್ಲಿ ನೀರು ಸೋರಿಕೆಯಾಗುವುದನ್ನು ತಡೆಯಲು ಗ್ರೌಟಿಂಗ್ ಮಾಡುವಂತೆ ಭಾರತೀಯ ರೈತ ಒಕ್ಕೂಟ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

ಭದ್ರಾ ನಾಲೆಗಳನ್ನು ಆಧುನೀಕರಣಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿ, ನಾಲೆಗಳು ಆರು ದಶಕಗಳನ್ನು ಕಳೆದರೂ ಗೇಟುಗಳು ದುರಸ್ತಿ ಕಂಡಿಲ್ಲ. ನಾಲೆಯ ಕೊನೆಭಾಗಕ್ಕೆ ನೀರು ತಲುಪುತ್ತಿಲ್ಲ. ಆದ್ದರಿಂದ ರೈತರ ಕಾಲುವೆ ಹೂಳು ತೆಗೆದು ನಾಲಾ ಆಧುನೀಕರಣ ಮಾಡಿದರೆ ಕೊನೆ ಭಾಗದ ರೈತ ಜಮೀನುಗಳಿಗೆ ನೀರು ತಲುಪಲು ಸಾಧ್ಯ.

ಭದ್ರಾ ಅಣೆಕಟ್ಟೆ ಕಟ್ಟಿ ಏಳು ದಶಕಗಳು ಕಂಡಿವೆ. ಎಡ ಮತ್ತು ಬಲ ನಾಲೆಗಳ ಗೇಟುಗಳು ಸ್ಟ್ರಕ್ಕಾಗಿ ಮೇಲೆ ಕೆಳಗೆ ಏರಿಸಲು ಇಳಿಸಲು ಆಗುತ್ತಿಲ್ಲ. ಕ್ರಸ್ಟ್ ಗೇಟುಗಳು ಸಹ ಸರಿಯಿ ಲ್ಲದೆ ಕಟ್ಟು ಹೋಗಿವೆ. ಅಣೆಕಟ್ಟಿಗೆ ಗ್ರೌಟಿಂಗ್ ಮಾಡಬೇಕಿದೆ. ಇಲ್ಲದಿದ್ದರೆ ನೀರು ಬಹಳ ಸೋರಿಕೆಯಾಗುತ್ತದೆ. ಡ್ರಿಪ್ ಗ್ರೌಟಿಂಗ್ ಮಾಡಿದರೆ ಅಣೆಕಟ್ಟೆ ಭದ್ರವಾಗುತ್ತದೆ.  ಮಧ್ಯ ಕರ್ನಾಟಕ ದ ಸಂಪೂರ್ಣ ರೈತರಿಗೆ ಬಳಕೆಯಾಗುವ ಅಣೆಕಟ್ಟೆ ಅಂದರೆ ಭದ್ರಾ ಅಣೆಕಟ್ಟು. ರೈತರ ನೆಮ್ಮದಿಗಾಗಿ ನಿಗದಿತ ಅವಧಿಯೊಳಗಾಗಿ ಕೆಲಸ ಮುಗಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹೆಚ್.ಆರ್. ಲಿಂಗರಾಜ್, ಮಹೇಶ್  ಕುಂದುವಾಡ, ಹನುಮಂತಪ್ಪ ಕುಂದುವಾಡ, ನಾಗರಾಜ ರಾವ್ ಕೊಂಡಜ್ಜಿ, ಪುನೀತ ಕುಂದುವಾಡ, ಎ.ಎಂ.ಮಂಜುನಾಥ, ಗೋಪನಾಳ ರುದ್ರಗೌಡ, ಕಲ್ಲಿಂಗಪ್ಪ ಕಕ್ಕರಗೊಳ್ಳ, ರಾಜಣ್ಣ ನಾಗನೂರು, ಕರಿಬಸಪ್ಪ, ಕೆ.ಹೆಚ್‌. ನಾಗರಾಜ್, ತೇಜಪ್ಪ ಮುದಹದಡಿ, ಮೋಹನ್, ವಿಶ್ವನಾಥ ಬೆಳವನೂರು ಇದ್ದರು.

error: Content is protected !!