ಕೆ.ಎನ್.ಹಳ್ಳಿ ಪಿಎಸಿಎಸ್ ಚುನಾವಣೆ : 9 ಜನ ಆಯ್ಕೆ

ಮೂವರು ಅವಿರೋಧ ಆಯ್ಕೆ

ಮಲೇಬೆನ್ನೂರು, ಜ.5- ಕಡಾರನಾಯ್ಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 9 ಜನ ಆಯ್ಕೆಯಾಗಿದ್ದಾರೆ.

ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ವರ್ಗದಿಂದ ಕೊಕ್ಕನೂರು ನಟರಾಜ್, ಮಸವಳ್ಳಿ ರಾಜು, ಟಿ.ರಾಜಪ್ಪ, ಗೌಡ್ರ ರುದ್ರಗೌಡ, ಸುರೇಶ್ ಹೊಳೆಯಾಚೆ ಮಹಿಳಾ ಮೀಸಲು ವರ್ಗದಿಂದ ಶ್ರೀಮತಿ ಕೂಶಪ್ಪರ ಇಂದ್ರಮ್ಮ, ಶ್ರೀಮತಿ ಗುಬ್ಬಿ ಶಾರದಮ್ಮ, ಎಸ್ಟಿ ವರ್ಗದಿಂದ ಕಮತರ ಹನುಮಂತಪ್ಪ, ಬಿಸಿಎಂ `ಬಿ’ ವರ್ಗದಿಂದ ನಿಬಗೂರು ಹನುಮಂತಪ್ಪ ಇವರುಗಳು ಚುನಾಯಿತರಾಗಿದ್ದಾರೆ.

ಎಸ್ಸಿ ವರ್ಗದಿಂದ ಎ.ಕೆ.ಹಾಲೇಶ್, ಬಿಸಿಎಂ `ಎ’ ವರ್ಗದಿಂದ ರಿಯಾಜ್ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಜಿ.ಬಸಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

error: Content is protected !!