ನಗರದಲ್ಲಿ ನಾಳೆ ಕನಕ ಜಯಂತ್ಯುತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ

ದಾವಣಗೆರೆ, ಜ.3- ದಾವಣಗೆರೆ ಕುರುಬ ಸಮಾಜ ಹಾಗೂ ಸಿದ್ಧರಾಮಯ್ಯ ಅಭಿಮಾನಿ ಬಳಗದ ವತಿಯಿಂದ ನಾಡಿದ್ದು ದಿನಾಂಕ 5 ರ ಭಾನುವಾರ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾಮಟ್ಟದ 537 ನೇ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುರುಬ ಸಮಾಜದ ಮುಖಂಡರೂ, ಮಾಜಿ ಶಾಸಕ ಎಸ್. ರಾಮಪ್ಪ ಹಾಗೂ ಯುವ ಮುಖಂಡ ಜೆ.ಎನ್. ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನಕ ಜಯಂತಿ ಪ್ರಯುಕ್ತ ನಾಳೆ ದಿನಾಂಕ 4 ರಂದು ನಗರದ ಎಸ್‌.ಎಸ್.ಹೈಟೆಕ್ ಆಸ್ಪತ್ರೆ ರಸ್ತೆಯಲ್ಲಿನ ಶ್ರೀ ಬೀರೇಶ್ವರ ಬಡಾವಣೆಯ ಬಳಿ ಇರುವ ಕಾಳಿದಾಸ ವೃತ್ತದಿಂದ ಬೈಕ್‌ ರ್ಯಾಲಿ ಆಯೋಜಿಸಲಾಗಿದ್ದು, ಎಂ.ಡಿ. ಶೇಖರಪ್ಪ, ಪುಷ್ಪಾ ಆನಂದ್, ಕೆ. ಪುಟ್ಟಪ್ಪ, ಎನ್.ಜಿ. ರುದ್ರಪ್ಪ, ಆರ್.ಹೆಚ್.ನಾಗಭೂಷಣ್ ಚಾಲನೆ ನೀಡಲಿದ್ದಾರೆ. ರ್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.

ನಾಡಿದ್ದು ದಿನಾಂಕ 5 ರಂದು ಬೆಳಿಗ್ಗೆ 9.30 ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎನ್. ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ಪಾಲಿಕೆ ಆಯುಕ್ತೆ ರೇಣುಕಾ, ಕಾಂಗ್ರೆಸ್ ಮುಖಂಡರಾದ ಎಸ್. ರಾಮಪ್ಪ, ಹೆಚ್.ಬಿ. ಮಂಜಪ್ಪ ಮೆರವಣಿೆಗೆ ಚಾಲನೆ ನೀಡುವರು.

ಇದೇ ವೇಳೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ತಿಂತಿಣಿ ಶಾಖಾ ಮಠದ ಶ್ರೀ ಸಿದ್ಧರಾಮಾನಂದ ಪುರಿ ಸ್ವಾಮೀಜಿ, ಹದಡಿಯ ಚಂದ್ರಗಿರಿ ಮಠದ ಶ್ರೀ ಮುರುಳೀಧರ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಾಂದ ಪುರಿ ಸ್ವಾಮೀಜಿ, ಹರಿಹರ ಪಂಚಮಸಾಲಿ ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಮುಸ್ಲಿಂ ಧರ್ಮಗುರು  ಮೌಲಾನಾ ಬಿ.ಎ.ಇಬ್ರಾಹೀಂ ಸಕಾಫಿ, ಕ್ರಿಶ್ಚಿಯನ್ ಧರ್ಮಗುರು ಫಾದರ್ ಯರಿಕ್ ಮ್ಯಾಥ್ಯೂಸ್, ಡಾ. ಉದಯ ಶಂಕರ್ ಒಡೆಯರ್, ಅಲ್ಲಾಮ ಇಲಿಯಾಸ್ ಖಾದ್ರಿ ಸಾನ್ನಿಧ್ಯ ವಹಿಸಲಿದ್ದಾರೆ.

ನಂತರ ನಡೆಯುವ ಕನಕ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ದಾಸ ಶ್ರೇಷ್ಠ ಕನಕ ದಾಸರ ಪುತ್ಥಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದು, ವಿಶೇಷ ಆಹ್ವಾನಿತರಾಗಿ ಸಚಿವರಾದ ಡಾ.ಜಿ.ಪರಮೇಶ್ವರ್, ಭೈರತಿ ಸುರೇಶ, ಡಾ. ಹೆಚ್.ಸಿ.ಮಹದೇವಪ್ಪ, ಸತೀಶ ಜಾರಕಿಹೊಳಿ, ಬಿ.ಜೆಡ್ ಜಮೀರ್ ಅಹಮದ್ ಖಾನ್, ಸಂತೋಷ್ ಎಸ್. ಲಾಡ್, ಶಿವರಾಜ್ ಎಸ್. ತಂಗಡಗಿ ಭಾಗವಹಿಸಲಿದ್ದಾರೆ.

ಇವರೊಂದಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಬಿ.ಪಿ ಹರೀಶ್, ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಬಿ. ದೇವೇಂದ್ರಪ್ಪ, ಬಿ.ಜೋ. ಗೋವಿಂದಪ್ಪ, ಬಸವರಾಜ್ ಶಿವಣ್ಣನವರ್, ತರಿಕೇರಿಯಲ್ಲಿ ಬಸವರಾಜ್  ಶಿವಣ್ಣನವರ್, ತರಿಕೆರೆ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕೆ.ಎಂ. ರಾಮಚಂದ್ರಪ್ಪ, ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಹೆಚ್.ಬಿ. ಮಂಜಪ್ಪ, ಮಹಿಮಾ ಜೆ.ಪಟೇಲ್, ಮಾಜಿ ಸಂಸದ  ಜಿ.ಎಂ. ಸಿದ್ದೇಶ್ವರ, ಎಸ್. ರಾಮಪ್ಪ, ಎಸ್.ಎ. ರವೀಂದ್ರನಾಥ್, ಹೆಚ್. ಆಂಜನೇಯ, ಹೆಚ್. ಕಾಂತರರಾಜ್, ನಂದಿಗಾವಿ ಶ್ರೀನಿವಾಸ್ ಸೇರಿದಂತೆ   ಇತರರು ಬೈಕ್ ರ್ಯಾಲಿಯಲ್ಲಿ ಭಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೆಚ್.ಬಿ. ಗೋಣೆಪ್ಪ, ಶ್ರೀನಿವಾಸ ನಂದಿಗಾವಿ, ಜೆ.ಎನ್. ಶ್ರೀನಿವಾಸ್, ಬಿ.ವೀರಣ್ಣ, ಬಿ. ರೇವಣ ಸಿದ್ಧಪ್ಪ, ಡಿ. ಬಸವರಾಜ್, ರಂಗಸ್ವಾಮಿ,  ಬಸಾಪುರದ ನಾಗೇಂದ್ರಚಾರ್, ಟಿ.ಎಸ್. ಶಿವಣ್ಣ, ಹಾಲೇಕಲ್ಲು ಅರವಿಂದ್ , ಹಾಲೇಕಲ್ಲು ಬಿ. ಲಿಂಗರಾಜು, ದಾದುಸೇಠ್, ಇಟ್ಟಿಗುಡಿ ಮಂಜಣ್ಣ, ಹೊನ್ನಳಿ ಸಿದ್ಧಪ್ಪ,ಮಹಮದ್ ಜಬೀವುಲ್ಲಾ, ವಜನಾ ಮತ್ತಿತರರು ಉಪಸ್ಥಿತರಿದದರು. 

error: Content is protected !!