ದಾವಣಗೆರೆ, ಜ.3- ಇಲ್ಲಿನ ತರಳಬಾಳು ಬಡಾವಣೆಯ ಎಂ.ಬಿ. ವಿನಯ್ (58) ಮೊನ್ನೆ ನಿಧನರಾದರು. ರಾಷ್ಟ್ರೀಯ ಹೆದ್ದಾರಿ ಬಳಿಯ ಶಾಮನೂರು ಚೌಲ್ಟ್ರಿ ಎದುರು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪ ಟ್ಟಿರುವ ಅವರಿಗೆ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ನಿನ್ನೆ ಸಂಜೆ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
ವಿನಯ್, ಅವರು ಮೂಲತಃ ಸಿವಿಲ್ ಇಂಜಿನಿಯರ್ ಆಗಿದ್ದರು. ಶ್ರೀ ಚೌಡೇಶ್ವರಿ ದೇವಸ್ಥಾನದ ಮುಖ್ಯ ಖಜಾಂಚಿಯೂ ಆಗಿದ್ದರು.