ನಗರದಲ್ಲಿ ಇಂದು ಆಟೋ ಎಕ್ಸ್‌ಪೋ

ದಾವಣಗೆರೆ, ಜ.3- ಸದರನ್ ಹೋಟೆಲ್ ಆವರಣದಲ್ಲಿ ನಾಳೆ ದಿನಾಂಕ 4 ಹಾಗೂ 5ರಂದು ಬೃಹತ್ ಆಟೋ ಎಕ್ಸ್‌ಪೋ ಆಯೋಜಿಸಲಾಗಿದೆ ಎಂದು ಆನಿ ಅಮೃತಾ ಶ್ರೀನಿವಾಸ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾಳೆ ದಿನಾಂಕ 4ರಂದು ಬೆಳಿಗ್ಗೆ 11 ಗಂಟೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆಟೋ ಎಕ್ಸ್‌ಪೋಗೆ ಚಾಲನೆ ನೀಡಲಿದ್ದಾರೆ. ದಾವಣಗೆರೆ ಶುಗರ್ಸ್ ಹಾಗೂ ಸದರನ್ ಹೋಟೆಲ್ ವ್ಯವಸ್ಥಾಪಕ ನಿರ್ದೇಶಕ ಅಭಿಜಿತ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅಮೃತಾ ಐ.ಎನ್.ಸಿ. ಸಹ ಸಂಸ್ಥಾಪಕ ಹೆಚ್.ಡಿ. ಶ್ರೀನಿವಾಸ್ ಮಾತನಾಡಿ,  15ಕ್ಕೂ ಹೆಚ್ಚು ಪ್ರತಿಷ್ಠಿತ ಬ್ರಾಂಡ್‌ ಕಂಪನಿಯ ಕಾರು ಹಾಗೂ ದ್ವಿಚಕ್ರ ವಾಹನಗಳು ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿ.ಜಿ. ತಿಮ್ಮಾರೆಡ್ಡಿ, ಎ.ಕೆ. ಚನ್ನಪ್ಪ, ನಯನ ಎಸ್.ಪಾಟೀಲ್, ಎಸ್.ಪಿ. ಲೋಹಿತ್ ಪ್ರಸಾದ್, ಆಂಥೋನಿ ರಾಜ್ ಇದ್ದರು.

error: Content is protected !!