ದಾವಣಗೆರೆ, ಜ.2- ಹರಿಹರ ತಾಲ್ಲೂಕು ಹಳ್ಳಿಹಾಳ್ ಮಟ್ಟಿ ಕ್ಯಾಂಪಿನ ಮನೆಯೊಂದರಲ್ಲಿ ಡಿಸೆಂಬರ್ 18ರಂದು ಬಾಗಿಲು ಮುರಿದು ಕಳವು ಮಾಡಿದ್ದ ಚಿನ್ನಾಭರಣ, ಹಣ ಹಾಗೂ ಗೂಡ್ಸ್ ವಾಹನವನ್ನು ಪೊಲೀಸರು ಗುರುವಾರ ಪತ್ತೆ ಮಾಡಿದ್ದಾರೆ. ಕಳವು ಮಾಡಿದ್ದ ಅದೇ ಗ್ರಾಮದ ಮಂಜುನಾಥ ಎಂಬಾತನಿಂದ 1.98 ಲಕ್ಷ ಮೌಲ್ಯದ 38 ಗ್ರಾಂ ಚಿನ್ನಾಭರಣ, 23,500 ರೂ.ನಗದು ಹಾಗೂ ಟಾಟಾ ಏಸ್ ಸರಕು ಸಾಗಣೆ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ್ ಸಗರಿ, ಪಿಎಸ್‌ಐ ಪ್ರಭು ಕೆಳಗಿನಮನಿ, ಎಸ್.ಬಿ. ಚಿದಾನಂದಪ್ಪ, ಎಎಸ್‌ಐ ಮಹ್ಮದ್ ಇಲ್ಯಾಸ್, ಸಿಬ್ಬಂದಿ ಫೈರೋಜ್ ಖಾನ್, ಲಕ್ಷ್ಮಣ, ವೆಂಕಟರಮಣ, ವಿನಾಯಕ, ಮಲ್ಲಿಕಾರ್ಜುನ, ವೀರೇಶ್, ಅನ್ಸರ್, ವಿಜಯ್, ಮುರುಳೀಧರ, ರಾಜಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.