ಎಲೆಬೇತೂರಿನಲ್ಲಿ ಇಂದು – ನಾಳೆ ತರಳಬಾಳು ಸಿರಿ ಸಂಭ್ರಮ

ಎಲೆಬೇತೂರು ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ, ಶ್ರೀ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ  ವಿದ್ಯಾರ್ಥಿ ಸಂಘದ ಸಮಾರೋಪ ಮತ್ತು ತರಳಬಾಳು ಸಿರಿ ಸಂಭ್ರಮವು ಇಂದು ಮತ್ತು ನಾಳೆ ಎಲೆಬೇತೂರು ಶಾಲಾ ಆವರಣದಲ್ಲಿ ನಡೆಯಲಿದೆ.

ಇಂದು ಬೆಳಿಗ್ಗೆ 10.30 ರಿಂದ ನಡೆಯುವ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಎಸ್.ಎಂ. ಮರುಳಸಿದ್ದಪ್ಪ ಉದ್ಘಾಟಿಸಲಿದ್ದಾರೆ. 

ಮಧ್ಯಾಹ್ನ 2.30ರಿಂದ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್. ಬಸವರಾಜಪ್ಪ ವಹಿಸಲಿದ್ದು, ನಾರದಮುನಿ ಗೌಡ್ರು
ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ನಾಳೆ ದಿನಾಂಕ 4ರ ಶನಿವಾರ 5 ಗಂಟೆಯಿಂದ ಶಾಲಾ ವಾರ್ಷಿಕೋತ್ಸವ ಮತ್ತು ತರಳಬಾಳು ಸಿರಿ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ. ಬಸವರಾಜಪ್ಪ ವಹಿಸಲಿದ್ದಾರೆ.

ಕೆ.ಜಿ. ಶೇಖರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹೆಚ್.ಕೆ. ಲಿಂಗರಾಜು ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹೆಚ್.ಆರ್. ಶೇರ್ ಅಲಿ, ಕೆ.ಎಂ. ರೇವಣಸಿದ್ದಪ್ಪ, ಮರಿಕುಂಟೆ ನಾಗಪ್ಪ, ಬಿ. ಪ್ರಭು, ಬಿ.ಜಿ. ಸಂಗನಗೌಡ್ರು, ಕೆ.ಎನ್. ಸೋಮಶೇಖರಪ್ಪ, ಟಿ. ರಾಜಣ್ಣ, ಶ್ರೀಮತಿ ಸುಮ ಬಿ.ಎಸ್. ಸತೀಶ್ ಉಪಸ್ಥಿತರಿರುವರು.

error: Content is protected !!