ರಾಣೇಬೆನ್ನೂರಿನಲ್ಲಿ ಇಂದು ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ

ಹುಣಸಿಕಟ್ಟೆ ರಸ್ತೆಯಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 22ನೇ ವರ್ಷದ ಶಾಲಾ ವಾರ್ಷಿಕೋತ್ಸವವು  ಶಾಲಾ ಆವರಣದಲ್ಲಿ ಇಂದು ಜರುಗಲಿದೆ.  ಶಾಲೆಯ ಅಧ್ಯಕ್ಷರಾದ ಶ್ರೀಮತಿ ವಜ್ರೇಶ್ವರಿ ವಿ. ಲದ್ವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕರು ಹಾಗೂ ಸಂಪಾದಕರಾದ ರವೀಂದ್ರ ರೇಷ್ಮೆ,  ರಾಣೇಬೆನ್ನೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ರವರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ  ತುಳಜಪ್ಪ ಲದ್ವಾ  ಇತರರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರು, ಮುದ್ದು ಮಕ್ಕಳು, ಪಾಲಕರು, ಪೋಷಕ ಬಂಧುಗಳು ಹಾಜರಿರುವರು. ಅಂದು ಮಕ್ಕಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಜರುಗುವವು ಎಂದು ಶಾಲೆಯ ಪ್ರಾಂಶುಪಾಲ ಶೈನ್‌ ಜೋಶ್ ತಿಳಿಸಿದ್ದಾರೆ.

error: Content is protected !!