ಕವಿಗೋಷ್ಠಿ, ವೇಷಭೂಷಣ ಸ್ಪರ್ಧೆ

ದಾವಣಗೆರೆ, ಜ.1- ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಹಾಗೂ ಸ್ಫೂರ್ತಿ ಪ್ರಕಾಶನ ವತಿಯಿಂದ ಇದೇ ದಿನಾಂಕ 19ರ ಭಾನುವಾರ ಬೆಳಗ್ಗೆ 11ಕ್ಕೆ ನಗರದ ಹೊರವಲಯದ ತೋಟದೊಳಗೆ `ಕವಿಗೋಷ್ಠಿ ಹಾಗೂ ಹಳ್ಳಿ ಸೊಗಡಿನ ವೇಷ ಭೂಷಣ ಸ್ಪರ್ಧೆ’ ಆಯೋಜಿಸಲಾಗಿದೆ ಎಂದು ಗುಂಡಗಟ್ಟಿ ರಾಜಶೇಖರ್ ತಿಳಿಸಿದ್ದಾರೆ.

`ಸಂಕ್ರಾಂತಿಯ ಸೊಬಗು, ಹಳ್ಳಿ ಹಸುರಿನ ಮಡಿಲೊಳು’ ಈ ಶೀರ್ಷಿಕೆ ಯಡಿ ಕವಿಗೋಷ್ಠಿ ನಡೆಯಲಿದ್ದು, ಭಾಗವಹಿಸಲು ಇಚ್ಛಿಸುವವರು ಜ.5ರ ಒಳಗಾಗಿ 9844718412, 7019353970 ಹಾಗೂ 9611969690 ಸಂಪರ್ಕಿಸಿ  ಹೆಸರು ನೋಂದಾಯಿಸಬಹುದು. ಮಾಹಿತಿಗಾಗಿ ಮೇಲಿನ ಸಂಖ್ಯೆಗೆ ಸಂಪರ್ಕಿಸಲು ಅಣಬೇರು ತಾರೇಶ್‌ ತಿಳಿಸಿದ್ದಾರೆ.

error: Content is protected !!