ಶ್ರೀ ಮಹೇಶ್ವರ ಸೇವಾ ಸಮಿತಿಯ ವತಿಯಿಂದ ತುಂಗಭದ್ರಾ ನದಿ ತಟದಲ್ಲಿರುವ ಶ್ರೀ ಸಂಗಮೇಶ್ವರ, ಶ್ರೀ ಮಹೇಶ್ವರ ದೇವಸ್ಥಾನದಲ್ಲಿ ನಾಳೆ ಮಂಗಳವಾರ ಮಹೇಶ್ವರ ಸ್ವಾಮಿ ಜಾತ್ರೆಯನ್ನು ಆಚರಿಸಲಾಗುವುದು ಎಂದು ಶ್ರೀ ಮಹೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಚೇತನ ಮೂರ್ಕಲ್ ಹಾಗೂ ಪ್ರಧಾನ ಕಾರ್ಯದರ್ಶಿ ಕೊಂಡಜ್ಜಿ ಈಶ್ವರಪ್ಪ ತಿಳಿಸಿದರು. ಇಂದು ಸಂಜೆ ಮಹೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವು ಹಳೆಪೇಟೆ ಬಸವೇಶ್ವರ ದೇವಸ್ಥಾನದ ಆವರಣದಿಂದ ಆರಂಭಗೊಳ್ಳಲಿದೆ. ನಾಳೆ ಸ್ವಾಮಿಗೆ ಬ್ರಾಹ್ಮೀ ಮುಹೂರ್ತದಲ್ಲಿ ರುದ್ರಾಭಿಷೇಕ, ಅಲಂಕಾರ ಮಹಾಮಂಗ ಳಾರತಿ ನಂತರ ಬೆಲ್ಲ, ಬಾಳೆ ಹಣ್ಣು, ಅನ್ನ ಹಾಲು ಪ್ರಸಾದ ವಿತರಣೆ ನಡೆಯಲಿದೆ.
February 7, 2025