ಹರಪನಹಳ್ಳಿ ತಾಲ್ಲೂಕಿನ ಚನ್ನಾಪುರ ಗ್ರಾಮದ ಮಠದಲ್ಲಿ ಇಂದು ಶ್ರೀ ಮಹೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಹಾಗೂ ನಾಳೆ ಮಂಗಳವಾರ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನೆರವೇರಲಿದೆ.
ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯಸಾನ್ನಿಧ್ಯಲ್ಲಿ ಈ ಕಾರ್ಯಕ್ರಮ ನೆರವೇರಲಿದ್ದು, ನಾಳೆ ಮಂಗಳವಾರ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಮಹೇಶ್ವರ ಸ್ವಾಮಿಗಂಗಾ ಪೂಜೆಯೊಂದಿಗೆ ಗುಡಿ ತುಂಬಿಕೊಳ್ಳು ವುದು. ದಿನಾಂಕ 25ರ ಬುಧವಾರ ಬೆಳಿಗ್ಗೆ 11.30ಕ್ಕೆ ಉತ್ಸವ ಮೂಲಕ ಸ್ವಾಮಿ ಮೂಲ ಸ್ಥಳ ಸೇರಲಿದೆ.