ದಾವಣಗೆರೆ, ಡಿ. 18- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಶಿಕ್ಷಣ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲೋತ್ಸವ ವಸ್ತುಪ್ರದರ್ಶನದಲ್ಲಿ ತೋಟಗಾರಿಕೆ, ಹೊಲಿಗೆ, ಎಸ್ಯುಪಿಡಬ್ಲ್ಯು ವಿಭಾಗದಲ್ಲಿ ವಿವಿಧ ಶಾಲೆಗಳು ಬಹುಮಾನ ಪಡೆದುಕೊಂಡವು.
ತೋಟಗಾರಿಕೆ: ಸರ್ಕಾರಿ ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ) ಹೊಸಕೆರೆ ಪ್ರಥಮ, ಜಿ.ಜೆ. ಸಿ. ಕಾರಿಗನೂರು-ಕತ್ತಲಗೆರೆ ದ್ವಿತೀಯ, ಎಸ್ಎಸ್ಜೆವಿಪಿ ಸ. ಪ್ರೌ ಶಾಲೆ ಸಂತೇಬೆನ್ನೂರು ತೃತೀಯ ಬಹುಮಾನ ಪಡೆದುಕೊಂಡಿದೆ.
ಹೊಲಿಗೆ: ಸರ್ಕಾರಿ ಪ್ರೌಢಶಾಲೆ ಜೀನಹಳ್ಳಿ ನ್ಯಾಮತಿ ತಾ. ಪ್ರಥಮ, ಶ್ರೀ ಬೀರಲಿಂಗೇಶ್ವರ ಬಾಲಕಿಯರ ಪ್ರೌಢಶಾಲೆ ಮಲೇಬೆನ್ನೂರು ದ್ವಿತೀಯ, ಸರ್ಕಾರಿ ಉರ್ದು ಪ್ರೌಢಶಾಲೆ ಎಸ್ಎಸ್ಎಂನಗರ ದಾವಣಗೆರೆ ತೃತೀಯ ಬಹುಮಾನ ಪಡೆದಿದೆ.
ಎಸ್ಯುಪಿ ಡಬ್ಲ್ಯು: ಸರ್ಕಾರಿ ಪ್ರೌಢಶಾಲೆ ಬೆಳಗುತ್ತಿ ಮಲ್ಲಿಗೇನಹಳ್ಳಿ ಪ್ರಥಮ, ಸರ್ಕಾರಿ ಪ್ರೌಢಶಾಲೆ ಸಾಸ್ವೆಹಳ್ಳಿ, ಸರ್ಕಾರಿ ಬಾಲಕರ ಪ್ರೌಢಶಾಲೆ ದಾವಣಗೆರೆ ತೃತೀಯ ಬಹುಮಾನ ಪಡೆದುಕೊಂಡಿದೆ.