ದಾವಣಗೆರೆ,ಡಿ. 17- ಚಿತ್ರದುರ್ಗ – ಬಾಲೇನಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ಹಳಿಗಳಲ್ಲಿ 25 ರಿಂದ 30 ವರ್ಷದ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕೂದಲು, ಮೀಸೆ-ಗಡ್ಡವಿರುವ ಅಪರಿಚಿತನ ಶವ ನಿನ್ನೆ ದೊರೆತಿದೆ.
ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಸದರಿ ಮೃತನ ಹೋಲಿಕೆಯ ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ (08192-259643 ಅಥವಾ 9480802123) ಯನ್ನು ಸಂಪರ್ಕಿಸಬಹುದು.