ಹರಿಹರ, ಡಿ.16- ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಶ್ರೀ ಜಯಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸಮಾಜ ಬಾಂಧವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ತಾಲ್ಲೂಕಿನ ಪಂಚಮಸಾಲಿ ಸಮಾಜದ ಮುಖಂಡರು ಖಂಡಿಸಿದ್ದಾರೆ.
ಪಂಚಮಸಾಲಿ 2ಎ ಮೀಸಲಾತಿ ಹೋರಾಟವನ್ನು ಸರ್ಕಾರ ಪೊಲೀಸ್ ಬಲ ಪ್ರಯೋಗಿಸಿ ಹತ್ತಿಕ್ಕುವ ಕೆಲಸವನ್ನು ಮಾಡಿದೆ. ಜೊತೆಗೆ ಹೋರಾಟದಲ್ಲಿ ತೊಡಗಿಸಿಕೊಂಡ ಪಂಚಮಸಾಲಿ ಸಮಾಜದವರ ಮೇಲೆ ಹಿಗ್ಗಾ -ಮುಗ್ಗ ಹಲ್ಲೆ ಮಾಡಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡಿದೆ. ಅಲ್ಲದೆ ಹೋರಾಟದಲ್ಲಿ ಭಾಗಿಯಾದವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಇಂತಹ ಪ್ರಕರಣ ನಾಡಿನ ಇತಿಹಾಸದಲ್ಲೇ ನಡೆದಿರಲಿಲ್ಲ. ಇದರಿಂದಾಗಿ ಪಂಚಮಸಾಲಿ ಸಮಾಜದ ಜನಕ್ಕೆ ದೊಡ್ಡ ಅಘಾತವನ್ನು ತರಿಸಿದೆ. ಸರ್ಕಾರ ಈ ಕೂಡಲೇ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ವಾಪಾಸ್ಸು ಪಡೆಯಬೇಕು, ಲಾಠಿ ಚಾರ್ಜ್ ಪ್ರಕರಣದ ಬಗ್ಗೆ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಸಿರಿಗೆರೆ ಎನ್. ಜಿ ನಾಗನಗೌಡ್ರು, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ಪಿ.ಎಸ್.ಕೆ. ಫಾರ್ಮ ಮಾಲೀಕ ಹೆಚ್.ಎನ್. ಬಸವರಾಜ್, ಹೆಚ್.ಎಸ್. ನಾಗರಾಜ್, ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ದಿಟೂರು ಶೇಖರಪ್ಪ, ಮಾಜಿ ತಾಪಂ ಸದಸ್ಯ ಗುತ್ತೂರು ಹಾಲೇಶ್ ಗೌಡ್ರು, ಮಾಜಿ ಎಪಿಎಂಸಿ ಸದಸ್ಯ ಚಂದ್ರಶೇಖರ್ ಪೂಜಾರ್ ಹನಗವಾಡಿ, ನಗರಸಭೆ ಉಪಾಧ್ಯಕ್ಷ ಗುತ್ತೂರು ಜಂಬಣ್ಣ, ಸದಸ್ಯ ಕೆ.ಜಿ. ಸಿದ್ದೇಶ್, ಹರಿಹರೇಶ್ವರ ಬ್ಯಾಂಕ್ ಅಧ್ಯಕ್ಷ ಜಿ.ಕೆ. ಮಲ್ಲಿಕಾರ್ಜುನ, ಮರ್ಚೆಂಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆಚ್. ಎಂ. ನಾಗರಾಜ್, ಹರ ಸೊಸೈಟಿ ಅಧ್ಯಕ್ಷ ಬಸಟ್ಟೆಪ್ಪ ಬೇವಿನಹಳ್ಳಿ, ಇಂಜಿನಿಯರ್ ಯೋಗಿಶ್ ಪಾಟೀಲ್, ಪರಮೇಶ್ವರಗೌಡ್ರು, ವಕೀಲರು ರುದ್ರಗೌಡ್ರು, ಬಸವರಾಜ್ ಓಂಕಾರಿ, ಮಾಜಿ ತಾಪಂ ಸದಸ್ಯ ಕೊಟ್ರೇಶ್ ಗೌಡ್ರು ಇತರರು ಹಾಜರಿದ್ದರು.