ನಗರದಲ್ಲಿ ಗಾಂಜಾ ಮಾರಾಟಗಾರನ ಬಂಧನ

ದಾವಣಗೆರೆ, ಡಿ.16- ನಗರದ ಹದಡಿ ರಸ್ತೆಯ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ  ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಎಸ್‌.ಕಿರಣ್‌ ಬಂಧಿತ ಆರೋಪಿಯಾಗಿದ್ದು, ಈತನಿಂದ ಅಂದಾಜು 1ಲಕ್ಷ ರೂ. ಮೌಲ್ಯದ 1ಕೆ.ಜಿ ಗಾಂಜಾ ಮತ್ತು ಬೈಕ್‌ ವಶ ಪಡಿಸಿಕೊಂಡಿದ್ದು, ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!