ರಾಣೇಬೆನ್ನೂರಿನ ಪಂಚಮಸಾಲಿ ಸಮಾಜದ ಖಂಡನೆ
ರಾಣೇಬೆನ್ನೂರು, ಡಿ. 13- ತಮ್ಮನ್ನು 2ಎ ಗೆ ಸೇರಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಸಿದ ಪಂಚಮಸಾಲಿ ಸಮಾಜದ ಮೇಲೆ ಪೋಲೀಸರು ಲಾಠಿ ಪ್ರಹಾರ ಮಾಡಿದ್ದು, ಅತ್ಯಂತ ಹೀನ ಕಾರ್ಯ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ನಗರದ ಪಂಚಮಸಾಲಿ ಸಮಾಜದ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಮೊದಲಿಗೆ ಹಳೆ ಪೂನಾ- ಬೆಂಗಳೂರು ರಸ್ತೆ ತಡೆ ನಡೆಸಲಾಗಿದ್ದು ಭಾರತಿ ಜಂಬಗಿ, ಎ.ಬಿ.ಪಾಟೀಲ, ಸಂತೋಷ ಪಾಟೀಲ, ಸಿದ್ದಪ್ಪ ಚಿಕ್ಕಬಿದರಿ ಎಸ್.ಎಸ್.ರಾಮಲಿಂಗಣ್ಣನವರ, ಕೊಟ್ರೇಶ ಎಮ್ಮಿ, ಕಿರಣ ಮುಂಡಾಸದ, ಮಲ್ಲಪ್ಪ ಅಂಗಡಿ,ನಾಗರತ್ನ ಗುಡಿಹಳ್ಳಿ, ಪ್ರಮೀಳಾ ಜಂಬಗಿ, ಗೀತಾ ಕಾಕೋಳ,ವಸಂತ ಹುಲ್ಲತ್ತಿ, ಬಸವರಾಜ ಹುಲ್ಲತ್ತಿ, ಶಿವಾನಂದ ಬೆನ್ನೂರ, ಶಿವಪ್ಪ ಗುರಿಕಾರ, ಬಸವರಾಜ ಪಾಟೀಲ ಮತ್ತಿತರರು ಭಾಗವಹಿಸಿದ್ದರು.