ಕೃಷಿಯಲ್ಲಿ ಉದ್ಯೋಗ ಸೃಷ್ಠಿಯಾಗಲಿದೆ

`ನಿರುದ್ಯೋಗ ಸಮಸ್ಯೆ- ಪರಿಹಾರದ ಮಾರ್ಗಗಳು’ ವಿಚಾರಗೋಷ್ಠಿಯಲ್ಲಿ ಜಗದೀಶ್‌

ದಾವಣಗೆರೆ, ಡಿ.15- ದೇಶದಲ್ಲಿ ದೊಡ್ಡ ಪ್ರಮಾಣದ ಕೃಷಿ ಭೂಮಿಯಿದೆ. ಇಲ್ಲಿ ಕೃಷಿ ಮಾಡಿದರೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಜಗದೀಶ್‌ ಹೇಳಿದರು.

ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ನಗರದ ಹೈಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಿದ್ದ `ನಿರುದ್ಯೋಗ ಸಮಸ್ಯೆ- ಪರಿಹಾರ ಮಾರ್ಗಗಳು’ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 14 ಲಕ್ಷ ಎಕರೆ ಭೂಮಿಯು ಕೃಷಿಗೆ ಯೋಗ್ಯವಾಗಿದೆ. ಅಲ್ಲಿ ಸಾವಯುವ ಕೃಷಿ ಮಾಡಲು ಯುವಕರು ಮುಂದಾಗಬೇಕು ಮತ್ತು ಮಿಶ್ರ ಬೆಳೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಯುವಕರು ಉದ್ಯೋಗ ಹುಡು ಕಾಟದ ಬದಲು ಉದ್ಯೋಗ ಸೃಷ್ಠಿಸುವಂತ ವರು ಆಗಬೇಕು. ಈ ನಿಟ್ಟಿನಲ್ಲಿ ದುಡಿಮೆ ಮಾಡುವಾಗ ಕೆಲಸದ ಬಗ್ಗೆ ಹಿಂಜರಿಕೆ ಇರಬಾರದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಕೌಶಲ್ಯಗಳ ಕೊರತೆ ಇರುವುದರಿಂದ ಯುವಕರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಹಾಗಾಗಿ ಕಾಲೇಜುಗಳು ನಿರುದ್ಯೋಗಿಗಳನ್ನು ತಯಾರಿಸುವ ಕಾರ್ಖಾನೆಗಳಾಗಿವೆ ಎಂದು ದೂರಿದರು.

ದೇಶದಲ್ಲಿ ಸರ್ಕಾರವು ಸಣ್ಣ ಉದ್ಯಮಕ್ಕೆ ಸಾಲ ನೀಡುವಂತಾಗಬೇಕು. ಮುಖ್ಯವಾಗಿ ಯುವಕರಿಗೆ ಕೌಶಲ್ಯ ನೀಡುವ ಕಾರ್ಯಕ್ರಮಗಳು ಬರಬೇಕು ಎಂದ ಅವರು, ಇಂದಿನ ಸರ್ಕಾರಗಳು ಉದ್ಯೋಗ ಸೃಷ್ಠಿಸುವ ಉದ್ದೇಶ ಹೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಂ. ಆನಂದ್‌, ಬಸವರಾಜ್‌ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿದ್ದರು.

error: Content is protected !!