ದಾವಣಗೆರೆ, ಡಿ.15- ನಿವೃತ್ತ ನೌಕರರಿಗೆ 7ನೇ ವೇತನ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ನಾಳೆ ದಿನಾಂಕ 16 ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿಯ ರಾಜ್ಯ ಸಂಚಾಲಕ ಡಿ. ಆನಂದಪ್ಪ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 01-07-2022 ರಿಂದ 31-07-2024 ರ ಅವಧಿಯಲ್ಲಿ ನಿವೃತ್ತ ಸರ್ಕಾರಿ ನೌಕರರರಾದ ನಾವುಗಳು 7ನೇ ವೇತನ ಆಯೋಗದ ಅವಧಿಯ ಲ್ಲಿಯೇ ಸೇವೆ ಸಲ್ಲಿಸಿದ್ದೇವೆ. ಹಾಗಾಗಿ 7ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿಯೇ ಪರಿಷ್ಕೃತ ಆದೇಶ ಹೊರ ಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಅವಧಿಯಲ್ಲಿ 26,423 ನಿವೃತ್ತ ನೌಕರ ರಿದ್ದು, ಇವರಿಗೆ 7ನೇ ವೇತನ ಆಯೋಗದ ಅನು ಷ್ಠಾನದಲ್ಲಿ ನಿವೃತ್ತಿ ಸೌಲಭ್ಯವನ್ನು ನೀಡದೇ 6ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಿರುವು ದರಿಂದ `ಎ’ ದರ್ಜೆಯಿಂದ `ಡಿ’ ದರ್ಜೆ ನೌಕರರಿಗೆ 6ರಿಂದ 22 ಲಕ್ಷದ ವರೆಗೆ ಆರ್ಥಿಕ ನಷ್ಟವಾಗಿದೆ ಎಂದು ತಮ್ಮ ಅಳಲು ತೋಡಿದರು.
ರಾಜ್ಯ ಸಂಚಾಲಕ ಮಂಜುನಾಥ ರೆಡ್ಡಿ ಮಾತನಾಡಿ, 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಜಿ, ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳ ಸೌಲಭ್ಯಗಳ ವ್ಯತ್ಯಾಸದ ಮೊತ್ತವನ್ನು ನೀಡುವಂತೆ ಆಗ್ರಹಿಸಿದರು.
ಈ ವೇಳೆ ಸಂಘಟನೆಯ ನಿವೃತ್ತ ಪಿಎಸ್‌ಐ ಏಕಾಂತಪ್ಪ, ನಿವೃತ್ತ ಎಎಸ್‌ಐ ನಾಗರಾಜ್, ಅಬ್ದುಲ್ ಸತ್ತಾರ್ ಸುದ್ದಿಗೋಷ್ಠಿಯಲ್ಲಿದ್ದರು.