ಎಂ.ಸಿ.ಸಿ `ಬಿ’ ಬ್ಲಾಕ್ ಬಿಐಇಟಿ ರಸ್ತೆಯಲ್ಲಿ ರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಇಂದು ಮಂಡಲ ಪೂಜೆ, ದೀಪೋತ್ಸವ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಬೆಳಿಗ್ಗೆ 5.30 ಕ್ಕೆ ಪಂಚ ದೇವರಿಗೆ ಪಂಚಾಮೃತ, ಶ್ರೀ ಅಯ್ಯಪ್ಪಸ್ವಾಮಿ ತುಪ್ಪದ ಅಭಿಷೇಕ, ಸಹಸ್ರ ನಾಮಾವಳಿ, ಪುಷ್ಪಾರ್ಚಾನೆ ಅಲಂಕಾರ, ಮಂತ್ರಪುಷ್ಪ, ಅಷ್ಟಾವರ್ಧನ ಮಹಾಗಣಪತಿ ಹೋಮ, ಮಹಾಮಂಗಳಾರತಿ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಸಂಜೆ 5 ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ಭವ್ಯ ಮೆರವಣಿಗೆ, ದೀಪಾರಾಧನೆ, ಪಡಿಪೂಜೆ ಮಂಗಳಾರತಿ ನಡೆಯಲಿದೆ.