ದಾವಣಗೆರೆ, ಡಿ. 13- ಶ್ರೀ ಗುರು ರಾಮದಾಸ ಸ್ವಾಮಿ ಅಧ್ಯಾತ್ಮಿಕ ಸೇವಾ ಟ್ರಸ್ಟ್ ವತಿಯಿಂದ ನಾಡಿದ್ದು ದಿನಾಂಕ 15 ರ ಭಾನುವಾರ ಬೆಳಿಗ್ಗೆ 10.30 ಕ್ಕೆ ನಗರದ ಮಹಾನಗರ ಪಾಲಿಕೆ ಆವರಣದಲ್ಲಿರುವ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಶ್ರೀ ಗುರು ರಾಮದಾಸರ 66 ನೇ ವರ್ಷದ ಹಾಗೂ ಶ್ರೀ ಕೊಂಡಯ್ಯ ಸ್ವಾಮಿಗಳ 18 ನೇ ವರ್ಷದ ಪುಣ್ಯಾರಾಧನೆ, 33 ನೇ ವರ್ಷದ ಸಾಮೂಹಿಕ ವಿವಾಹ, ಜಿಲ್ಲಾ ಮಾದಿಗ-ಛಲವಾದಿ ಸಮಾಜದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗುರು ರಾಮದಾಸ ಸ್ವಾಮಿ ಅಧ್ಯಾತ್ಮಿಕ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹಿರಿಯೂರು ಆದಿ ಜಾಂಬವ ಮಠದ ಶ್ರೀ ಷಡಕ್ಷರ ಮುನಿ ಸ್ವಾಮೀಜಿ, ಮೈಸೂರು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಮಾವೇಶ ಉದ್ಘಾಟಿಸುವರು. ಸಚಿವ ಕೆ.ಹೆಚ್. ಮುನಿಯಪ್ಪ ಭಗವಾನ್ ಬುದ್ಧ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.
ಸಚಿವ ಹೆಚ್.ಸಿ. ಮಹದೇವಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ, ಸಚಿವ ಆರ್.ಬಿ. ತಿಮ್ಮಾಪುರ ಬಾಬು ಜಗಜೀವನ ರಾಂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ವಧುಗಳಿಗೆ ಮಾಂಗಲ್ಯ ವಿತರಣೆ, ಸಂಸದ ಗೋವಿಂದ ಕಾರಜೋಳ ವಧು-ವರರಿಗೆ ವಸ್ತ್ರಗಳನ್ನು ವಿತರಣೆ ಮಾಡಲಿದ್ದಾರೆ. ಮಾಜಿ ಸಚಿವ ಹೆಚ್.ಆಂಜನೇಯ ಶ್ರೀ ಕೊಂಡಯ್ಯ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾದಿಗ ಮತ್ತು ಛಲವಾದಿ ಸಮಾಜದ ಮುಖಂಡರಾದ ಎನ್. ರುದ್ರಮುನಿ, ಎಲ್.ಎಂ. ಹನುಮಂತಪ್ಪ, ಕೆ.ಚಂದ್ರಣ್ಣ, ಎಸ್. ಮಲ್ಲಿಕಾರ್ಜುನ್, ಡಾ. ಜಗನ್ನಾಥ್, ನಿರಂಜನ್, ಎಸ್.ಶೇಖರಪ್ಪ, ಕುಂದುವಾಡ ಮಂಜುನಾಥ್, ಡಿ. ಹನುಮಂತಪ್ಪ, ಅಕ್ಕಿ ಬಸವರಾಜ್, ಮಂಜಮ್ಮ, ವಿಜಯಮ್ಮ, ಆದಾಪುರ ನಾಗರಾಜ್, ಬಿ.ಆರ್. ಶಿವಮೂರ್ತಿ, ರಾಕೇಶ್, ನಾಗಭೂಷಣ್, ರಾಮಯ್ಯ, ನವೀನ್, ಕೊಟ್ರಬಸಪ್ಪ, ಅಂಜಿನಪ್ಪ ಹರಿಹರ, ರೇವಣಸಿದ್ಧಪ್ಪ, ಅಣ್ಣಪ್ಪ, ಪರಶುರಾಮಪ್ಪ, ಚಿರಂಜೀವಿ, ಜಿ.ಬಿ. ಅಭಿ, ಮಂಜುನಾಥ್, ಗೋಪಾಲ್, ಈಶ್ವರ್, ಮಂಜುನಾಥ್, ಉಮಾ ಮತ್ತಿತರರಿದ್ದರು.