ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾಗಿ ಹಾಲೇಶ್

ಆಲೂರು ನಿಂಗರಾಜ್‌ ನೇತೃತ್ವದಲ್ಲಿ ಆಯ್ಕೆ

ದಾವಣಗೆರೆ, ಡಿ.11- ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಿತಿಯನ್ನು ಸಂಘದ ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜ್‌ ನೇತೃತ್ವದಲ್ಲಿ ಇಂದು  ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಗಾಂಧಿನಗರದ ಎಂ. ಹಾಲೇಶ್‌, ಅಧ್ಯಕ್ಷರಾಗಿ ರಾಜು ಶಾಮನೂರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಜಯಪ್ರಕಾಶ್‌ ಬಾಬು, ಅಂಜಿನಪ್ಪ ಶಾಮನೂರು, ಲಕ್ಷ್ಮಣ ಕೊಡಗನೂರು, ಸಾವಜ್ಜರ ಮಂಜುನಾಥ ಕುಂದವಾಡ, ಪೂಜಾರ್‌ ಸಿದ್ದಪ್ಪ ತುಪ್ಪದಹಳ್ಳಿ, ಹುಚ್ಚಂಗಿ ಪ್ರಸಾದ್‌ ಸಂತೇಬೆನ್ನೂರು, ಶಾಂತರಾಜ್‌ ಕುಂದೂರು.

ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್‌ ಡಿ. ಆಲೂರು, ಸಂಘಟನಾ ಕಾರ್ಯದರ್ಶಿಯಾಗಿ ಹಾಲೇಶ್‌ ಬಿ., ಕೆ.ಹೆಚ್‌. ಅವಿನಾಶ್, ಕಾರ್ಯದರ್ಶಿ ಯಾಗಿ ಆನಂದ ಎಂ. ಜಾಲಿಹಾಳ್‌, ಹರೀಶ್‌ ಹೊನ್ನೂರು (ಎಸ್‌.ಜೆ.ಎಂ. ನಗರ), ಖಜಾಂಚಿಯಾಗಿ ದುರುಗೇಶ್‌ ಎಂ. (ನಿಟುವಳ್ಳಿ), ಸದಸ್ಯರುಗಳಾಗಿ ಆವರಗೆರೆ ಚಂದ್ರಪ್ಪ, ಬಾತಿ ಸತೀಶ್‌, ಬೇತೂರು ಹನುಮಂತಪ್ಪ, ಕೋಲ್ಕುಂಟೆ ಚಂದ್ರಪ್ಪ, ಸಿದ್ದಪ್ಪ ಕೊಗ್ಗನೂರು, ಮಹೇಶ್‌ ಬಾಡ, ಅತ್ತಿಗೆರೆ ಸಿದ್ದಪ್ಪ ಆಯ್ಕೆಯಾಗಿದ್ದಾರೆ.

error: Content is protected !!