ಕಳ್ಳನ ಬಂಧನ : 3.96 ಲಕ್ಷ ರೂ. ಮೌಲ್ಯದ ಸ್ವತ್ತು ವಶ

ಜಗಳೂರು, ಡಿ.11- ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಸೆರೆ ಹಿಡಿದ ಜಗಳೂರು ಪೊಲೀಸರು, 3.96 ಲಕ್ಷ ರೂ.ಮೌಲ್ಯದ ಸ್ವತ್ತನ್ನು ವಶ ಪಡಿಸಿಕೊಳ್ಳುವ ಜತೆಗೆ ಕಳ್ಳನನ್ನು ಬಂಧಿಸಿದ್ದಾರೆ.

ಸಿ. ಸಿದ್ದೇಶ್‌ ಬಂಧಿತ ಆರೋಪಿಯಾಗಿದ್ದು, ಈತನಿಂದ 3.85 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, 10 ಸಾವಿರ ಮೌಲ್ಯದ ಮೊಬೈಲ್‌ ಹಾಗೂ 1500 ರೂ. ಬೆಲೆಯ ಬ್ಲೂಟೂತ್‌ ಜಪ್ತಿ ಮಾಡಿದ್ದು, ಆಪಾದಿತನನ್ನು ನ್ಯಾಯಾಂಗ ಬಂಧನಕ್ಕೆ ಹಾಜರು ಪಡಿಸಲಾಗಿದೆ. 

ಡಿ.4ರಂದು ಜಗಳೂರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ 55 ಗ್ರಾಂ ಬಂಗಾರ, ಮೊಬೈಲ್‌, ಬ್ಲೂಟೂತ್‌ ಹೆಡ್‌ಸೆಟ್‌ ಕಳ್ಳತನವಾಗಿರುವ ಬಗ್ಗೆ ತಾಲ್ಲೂಕಿನ ನಿಬಗೂರು ಗ್ರಾಮದ ಶರಣಪ್ಪ ಅವರು ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

error: Content is protected !!