ದಾವಣಗೆರೆ – ಇಲ್ಲಿನ ಮಂಡಕ್ಕಿ ಭಟ್ಟಿ ಲೇಔಟ್‌ನಲ್ಲಿರುವ ರಾಯಲ್ ಕ್ರಿಕೆಟರ್ಸ್ ಸಹಯೋಗ ದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಇಂದು ಸಮಾರೋಪಗೊಳ್ಳಲಿದ್ದು ಫೈನಲ್ ಪಂದ್ಯಾವಳಿ ನಡೆಯಲಿದೆ.
ಕಳೆದ ಮೂರು ದಿನಗಳಿಂದ ದಕ್ಷಿಣ ಕ್ಷೇತ್ರಕ್ಕೆ ಸೀಮಿತವಾಗಿರುವಂತೆ ಐಪಿಎಲ್ ಮಾದರಿಯಲ್ಲಿ ಪ್ರೀಮಿಯರ್ ಲೀಗ್ ಮ್ಯಾಚ್‌ಗಳನ್ನು ನಡೆಸಿದ್ದು, ಎಂಟು ತಂಡಗಳನ್ನು ಫ್ರಾಂಚೈಸಿ ರೂಪದಲ್ಲಿ ವಿಂಗಡಿಸಿ 120 ಜನ ಆಟಗಾರರು ಪಾಲ್ಗೊಂಡಿದ್ದರು ಎಂದು ವ್ಯವಸ್ಥಾಪಕ ಅಬ್ದುಲ್ ಘನಿ ತಿಳಿಸಿದರು.