ನಗರದಲ್ಲಿ ನಾಳೆ – ನಾಡಿದ್ದು ಗೀತಾ ಜಯಂತಿ : ಭಗವದ್ಗೀತೆ ಸ್ಪರ್ಧೆ

ದಾವಣಗೆರೆ, ಡಿ. 9- ನಗರದ ವರ್ತುಲ ರಸ್ತೆಯ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 11 ಮತ್ತು 12 ರಂದು ಎರಡು ದಿನಗಳ ಕಾಲ ಗೀತಾ ಜಯಂತಿ ಕಾರ್ಯಕ್ರಮವನ್ನು ಬ್ರಾಹ್ಮಣ ಸಮಾಜ ಸೇವಾ ಸಂಘದ ಮಹಿಳಾ ವಿಭಾಗದಿಂದ ಹಮ್ಮಿಕೊಳ್ಳಲಾಗಿದೆ.

ಶ್ರೀ ವಿಷ್ಣು ಸಹಸ್ರನಾಮ ಪಠಣ, ಭಗವದ್ಗೀತೆ ಒಂಭತ್ತನೇ ಅಧ್ಯಾಯ ಪಠಣ ನಂತರ ಗೀತಾ ಜಯಂತಿ ಅಂಗವಾಗಿ ನಡೆಸಿದ ಭಗವದ್ಗೀತೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಭಕ್ತರು ಭಾಗವಹಿಸುವಂತೆ ಬ್ರಾಹ್ಮಣ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಶ್ರೀಮತಿ ಅಡಿಗ ಕೋರಿದ್ದಾರೆ. 

error: Content is protected !!