ಹರಿಹರ : ದತ್ತ ಜಯಂತಿ ಆಚರಣೆ

ಹರಿಹರ, ಡಿ.9- ನಗರದ ಜಗದ್ಗುರು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ದತ್ತ ಪಾದುಕಾ ಮಂದಿರದಲ್ಲಿ ಶ್ರೀ ದತ್ತ ಜಯಂತಿಯನ್ನು ಇಂದಿನಿಂದ ಇದೇ ದಿನಾಂಕ 16 ರವರಿಗೆ ಆಚರಿಸಲಾಗುತ್ತದೆ ಎಂದು ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ನಾರಾಯಣ ಜೋಯಿಸರು ತಿಳಿಸಿದರು.

ದಿನಾಂಕ 16 ರವರಿಗೆ ಪ್ರತಿನಿತ್ಯ ಬೆಳಗ್ಗೆ ಕಾಕಡಾರತಿ, ಸಂಕಲ್ಪ, ಶ್ರೀ ಗುರು ಚರಿತ್ರೆ ಪಾರಾಯಣ, ದತ್ತಾತ್ರೇಯ ಪಾದುಕೆಗೆ ಲಘುನ್ಯಾಸ ಪೂರ್ವಕ ರುದ್ರಾಭಿಷೇಕ, ಸಂಜೆ 8 ರಿಂದ ಭಜನೆ ಮುಂತಾದ ಪೂಜೆಗಳು ನಡೆಯುತ್ತಿವೆ.

14 ರ ಶನಿವಾರ ವಿವಿಧ ಪೂಜಾ ಕಾರ್ಯಕ್ರಮಗಳು ಏರ್ಪಾಡಾಗಿವೆ.  ದಿನಾಂಕ 10 ರಂದು ಸಂಜೆ 6-30 ಕ್ಕೆ ದಾವಣಗೆರೆ ಅಜಯ ನಾರಾಯಣ ಇವರಿಂದ ಭಕ್ತಿ ಸಂಗೀತ, 11 ರಂದು ಸಂಜೆ 6-30 ಕ್ಕೆ ಶ್ರೀಮತಿ ಉಮಾ ಭಟ್ ರವರಿಂದ ಭಕ್ತಿ ಸಂಗೀತ,  12 ರಂದು ಸಂಜೆ 6-30 ಕ್ಕೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 13 ರಂದು ಸಂಜೆ 6-30 ಕ್ಕೆ ಪ್ರದೋಷ ಪೂಜೆ, ನಂತರ ಶ್ರೀ ಗುರು ದತ್ತಾತ್ರೇಯ ಭಕ್ತಿಗೀತೆ ನಡೆಯಲಿದೆ. 

ದತ್ತ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಮುದ್ರಿ, ಉಪಾಧ್ಯಕ್ಷ ಸುನೀಲ್ ಹವಾಲ್ದಾರ್,  ಕಾರ್ಯದರ್ಶಿ ಡಾ ಹರಿಶಂಕರ ಜೋಯಿಸರು, ಕೋಶಾಧ್ಯಕ್ಷ ಶ್ರೀನಿಧಿ ಶರ್ಮ, ದತ್ತ ಭಜನಾ ಮಂಡಳಿ ಅಧ್ಯಕ್ಷೆ ಭಾರತಿ ಬಾಯಿ ಕೊನೇರಿ ಇತರರು ಹಾಜರಿದ್ದರು.

error: Content is protected !!