ನಗರದ ಕಾನೂನು ಕಾಲೇಜಿನಲ್ಲಿ ಇಂದು `ಮಾನವ ಹಕ್ಕುಗಳ’ ದಿನಾಚರಣೆ

ಆರ್.ಎಲ್.ಕಾನೂನು ಕಾಲೇಜಿನ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ `ಮಾನವ ಹಕ್ಕುಗಳ’ ದಿನಾಚರಣೆ   ಹಮ್ಮಿಕೊಳ್ಳಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶ  ಮಹಾವೀರ ಮ.ಕರೆಣ್ಣನವರ, ಜಿಪಂ ಸಿಇಒ ಡಾ.ಸುರೇಶ್.ಬಿ.ಇಟ್ನಾಳ್, ಎಸ್ಪಿ ಉಮಾಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್,  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‌ಕುಮಾರ್ ಆಗಮಿಸುವರು. `ಹೊಸತು’ ಮಾಸಪತ್ರಿಕೆ ಸಂಪಾದಕ ಡಾ.ಸಿದ್ದನಗೌಡ ಪಾಟೀಲ್ ಉಪನ್ಯಾಸ ನೀಡುವರು.  ಪ್ರಾಂಶುಪಾಲ    ಡಾ.ಜಿ.ಎಸ್.ಯತೀಶ್ ಅಧ್ಯಕ್ಷತೆ ವಹಿಸುವರು.

error: Content is protected !!