ದಾವಣಗೆರೆ, ಡಿ.6- ನಗರದ ನೂಪುರ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಳೆ ದಿನಾಂಕ 7 ರ ಶನಿವಾರ ಸಂಜೆ 6 ಕ್ಕೆ ನಗರದ ಬಂಟರ ಭವನದಲ್ಲಿ ನೂಪುರ ನೃತ್ಯೋತ್ಸವ- 2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕರಾದ ಬೃಂದಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕ ಕೆ.ಎಸ್.ಶ್ರೀಧರ್, ವಾಸವಿ ಮಹಿಳಾ ಸಂಘದ ಗೌರವಾಧ್ಯಕ್ಷೆ ಹೇಮಾ ಶ್ರೀನಿವಾಸ್ ಆಗಮಿಸಲಿದ್ದಾರೆ. ಇದೇ ವೇಳೆ ವಿದುಷಿ ಪದ್ಮಿನಿ ಉಪಾಧ್ಯ, ಬಿ. ವಿಜಯಲಕ್ಷ್ಮಿ, ವಿದುಷಿ ಅಂಬಳೆ ರಾಜೇಶ್ವರಿ ಅವರನ್ನು ಗೌರವಿಸಲಾಗುವುದು ಎಂದು ಹೇಳಿದರು.
ಈ ಬಾರಿ ಚಿನ್ಮಯ ಕೃಷ್ಣನ ವಿಷಯ ಆಯ್ಕೆ ಮಾಡಿಕೊಂ ಡಿದ್ದು, ಈ ಸಂಬಂಧ ಒಂದು ಗಂಟೆ ಮೂವತ್ತು ನಿಮಿಷ ಅವಧಿಯದ್ದಾಗಿದ್ದು, ಐವತ್ತು ಮಕ್ಕಳು ನೃತ್ಯ ರೂಪಕದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವಿಜಯದುರ್ಗ, ಕೆ.ಎಂ. ನಾಗವೇಣಿ, ಸಿರಿ, ಪವಿತ್ರಾ ರಾಯ್ಕರ್, ನವ್ಯ ರಾಯ್ಕರ್ ಉಪಸ್ಥಿತರಿದ್ದರು.