ದಾವಣಗೆರೆ, ಡಿ.6-ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ವಿವಿಧ ಪ್ರೌಢಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ.ಕೆಂಚನಗೌಡ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ತಾನು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ, ಕೋಶಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕೆಂಚನಗೌಡ ಅವರ ನಾಡು – ನುಡಿಯ ಸೇವೆ ಶ್ಲ್ಯಾಘನೀಯ ಎಂದು ವಾಮದೇವಪ್ಪ ಹೇಳಿದ್ದಾರೆ.
ತಮ್ಮ 90ನೇ ವಯಸ್ಸಿನ ಲ್ಲಿಯೂ ಉತ್ತರ ಭಾರತದ ಪ್ರವಾಸ ಅದರಲ್ಲೂ ಮುಖ್ಯವಾಗಿ ಕಾಶಿ ಶ್ರೀ ವಿಶ್ವನಾಥನ ದರ್ಶನ, ಅಯೋ ಧ್ಯೆಯ ಶ್ರೀರಾಮಚಂದ್ರನ ದರ್ಶನ ಪಡೆದ ಹೆಗ್ಗಳಿಕೆ ಅವರದಾಗಿತ್ತು ಎಂದು ಅವರು ಸ್ಮರಿಸಿದ್ದಾರೆ.