ನಗರದಲ್ಲಿ ಇಂದು ರಾಜ್ಯಮಟ್ಟದ ಅಂತರ ಶಾಲಾ-ಕಾಲೇಜು ಹಂತದ `ಸಂಭ್ರಮ್’

ದಾವಣಗೆೇರೆ, ಡಿ. 6- ನಗರದ ಹೊರವಲಯದ  ಬಾಪೂಜಿ ವಿದ್ಯಾಸಂಸ್ಥೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಪಿಯು ಕಾಲೇಜು ಶಿವಗಂಗೋತ್ರಿ ತೋಳಹುಣಸೆಯಲ್ಲಿ ನಾಳೆ ದಿನಾಂಕ 7 ರ ಶನಿವಾರ ಐದನೇ ಆವೃತ್ತಿಯ ರಾಜ್ಯಮಟ್ಟದ ಅಂತರ್ ಶಾಲಾ-ಕಾಲೇಜು ಹಂತದ `ಸಂಭ್ರಮ್’ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ ಎಂದು ಪಿಎಸ್‌ಎಸ್‌ಇಆರ್‌ ಶಾಲೆಯ ಕನ್ನಡ ಉಪನ್ಯಾಸಕ ಶಂಕರ್ ನೆಸ್ವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪಿಎಸ್‌ಎಸ್‌ಇಎಂ ಆರ್ ಶಾಲೆ ತೋಳಹುಣಸೆ, ಎಸ್‌ಪಿಎಸ್‌ಎಸ್‌ ಪಿಯು ಕಾಲೇಜು ತೋಳಹುಣಸೆ, ಬಿಹೆಚ್‌ಪಿಇಎಂ ಶಾಲೆ ಮತ್ತು ಎಸ್‌ಎಸ್‌ಎನ್‌ಪಿಎಸ್ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.

ಚಿತ್ರನಟ ನವೀನ್ ಶಂಕರ್, ಸಂಖ್ಯಾ ಮಾಂತ್ರಿಕ ಬಸವರಾಜ್ ಶಂಕರ್ ಉಮಾರಾಣಿ, ವಾಸ್ತು ಶಿಲ್ಪಿ ಅನೂಪ್ ಆಗಮಿಸಲಿದ್ದಾರೆ. ಶಾಲೆಯ ಅಧ್ಯಕ್ಷ ಎಸ್.ಎಸ್. ಗಣೇಶ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಲೆಯ ಮುಖ್ಯಸ್ಥ ಮಂಜುನಾಥ್ ರಂಗರಾಜ್  ಮತ್ತಿತರರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಯೋಜಕ ಪ್ರಭು ಪುರವಂತರ, ಉಪಾಧ್ಯಕ್ಷ ಹೆಚ್.ಜಿ. ಉಮಾಪತಿ ಉಪಸ್ಥಿತರಿದ್ದರು. 

error: Content is protected !!