ಬಸವ ಬಳಗ, ಸಿಟಿ ಫ್ಯಾಮಿಲಿ ಸೆಂಟರ್, ಎಪಿಎಂಸಿ ವಾಯು ವಿಹಾರ ಬಳಗದ ಸಹಯೋಗ ದೊಂದಿಗೆ ವಿದ್ಯಾನಗರ ಆವರಣ ದಲ್ಲಿರುವ ಸಿಟಿ ಫ್ಯಾಮಿಲಿ ಸೆಂಟರ್ ಮುಂಭಾಗದ ಆವರಣದಲ್ಲಿ ಶಿವ ಸಂಚಾರ ನಾಟಕ ಮಂಡಳಿಯಿಂದ ಇಂದು ಮತ್ತು ನಾಳೆ ನಾಟಕಗಳ ಪ್ರದರ್ಶನ ನಡೆಯಲಿದೆ.
ಇಂದು ರಾತ್ರಿ 8.30ಕ್ಕೆ `ಬಂಗಾರದ ಮನುಷ್ಯ’ ನಾಟಕ ಹಾಗೂ ನಾಳೆ ಬುಧವಾರ ರಾತ್ರಿ 8.30ಕ್ಕೆ `ಕೋಳೂರು ಕೊಡಗೂಸು’ ನಾಟಕ ಪ್ರದರ್ಶನಗೊಳ್ಳಲಿದೆ.