ನಗರದಲ್ಲಿ ನಾಳೆ ದೇಹದಾರ್ಢ್ಯ ಸ್ಪರ್ಧೆ

ದಾವಣಗೆರೆ, ಡಿ.5- ಮಾಯಾಸ್‌ಫ್ರೆಂಡ್ಸ್ ಗ್ರೂಪ್,  ಜಿಎಸ್‌ಎನ್ ಗ್ಲೋಬಲ್ ಸ್ಪೋರ್ಟ್ಸ್ ನ್ಯೂಟ್ರಿಷನ್ ಹಾಗೂ ಮಣಿ ಸರ್ಕಾರ್ ನೇತೃತ್ವದಲ್ಲಿ ರಾಜ್ಯ ಮಟ್ಟದ ದೇಹದಾರ್ಢ್ಯ `ಕರ್ನಾಟಕ ಸಿರಿ-2024′ ಹಾಗೂ `ಸರ್ಕಾರ್ ಮೆನ್ಸ್ ಫಿಸಿಕ್ ಐಕಾನ್ ಚಾಂಪಿಯನ್‌ಶಿಪ್’ ಪಂದ್ಯಾವಳಿಯನ್ನು  ನಾಡಿದ್ದು ದಿನಾಂಕ 7ರ ಶನಿವಾರ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ದೇಹದಾರ್ಢ್ಯ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಏಕಬೋಟೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯನ್ ಬಾಡಿ ಬಿಲ್ಡಿಂಗ್  ಫೆಡರೇಷನ್, ಕರ್ನಾಟಕ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ಹಾಗೂ ದಾವಣಗೆರೆ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಸಹಯೋಗದಲ್ಲಿ  ಸ್ಪರ್ಧೆ ಸಂಘಟಿಸಲಾಗಿದೆ ಎಂದರು.

ದಿನಾಂಕ 7ರಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧೆಗೆ ಚಾಲನೆ ನೀಡುವರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮುರುಗೇಶ್ ದೇವರಮನೆ, ಆರ್.ಎಲ್. ಶಿವಪ್ರಕಾಶ್, ಎಲ್. ವಾಸುದೇವ್ ರಾಯ್ಕರ್, ನರೇಂದ್ರ ಕರೂರು, ಶ್ರೀನಿವಾಸ್ ದಾಸಕರಿಯಪ್ಪ, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ. ಸಂತೋಷ್ ಭಾಗವಹಿಸುವರು.

ಸಂಘಟನೆಯ ಪ್ರಮುಖರಾದ ಕೆ.ಎಂ. ಮಹೇಶ್, ನೂರ್ ಅಹ್ಮದ್, ಜಯಪ್ರಕಾಶ್, ಸಮೀರ್ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!