ದಾವಣಗೆರೆ, ಡಿ.5- ನಗರದ ಬಿ.ಎಂ. ಮುರುಗಯ್ಯ ಕುರ್ಕಿ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಆಜೀವ ಸದಸ್ಯ ರಾಗಿದ್ದ ಮುರುಗಯ್ಯ ಅವರು, ತಾನು ದಾವಣಗೆರೆ ತಾಲ್ಲೂಕು ಘಟಕದ ಅಧ್ಯಕ್ಷನಾಗಿದ್ದ ಸಂದರ್ಭ ದಲ್ಲಿ ಅವರು ಕಚೇರಿ ಕಾರ್ಯ ದರ್ಶಿಯಾಗಿ ಕಾರ್ಯ ನಿರ್ವಹಿಸಿ ದ್ದರು ಎಂದು ವಾಮದೇವಪ್ಪ ಸ್ಮರಿಸಿದ್ದಾರೆ.
February 5, 2025