ದಾವಣಗೆರೆ, ಡಿ.4- ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಸಮೀಪ ಪಿಸಾಳೆ ಕೌಂಪೌಡ್ ಹತ್ತಿರದ ಬಸ್ ಸ್ಟಾಪ್ ಸಮೀಪ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವ ನಿನ್ನೆ ಪತ್ತೆಯಾಗಿದೆ. ಸಾಧಾರಣ ಮೈಕಟ್ಟು, ಹಿಂದಿ ಅಕ್ಷರದಲ್ಲಿ ಸ್ಪಷ್ಟ ಹಚ್ಚೆ ಇರುತ್ತದೆ. ಕಪ್ಪು ಬಿಳಿ ಮಿಶ್ರಿತ ಕೂದಲು ಇದ್ದು, ಬಿಳಿ ಬಣ್ಣದ ಟಿ-ಶರ್ಟ್, ಹಸಿರು ಬಣ್ಣದ ಲೋಯರ್ ಧರಿಸಿರುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಬಡಾವಣೆ ಪೊಲೀಸ್ ಠಾಣೆ (ದೂ.ಸಂ: 08192-272012, 259213) ಯನ್ನು ಸಂಪರ್ಕಿಸಬಹುದು.
December 23, 2024