300 ರೈತರಿಗೆ ಭೂಮಿ ಪ್ರಶಸ್ತಿ

ದಾವಣಗೆರೆ, ಡಿ.2- ಭೂಮಿ ಡಿಜಿಟಲ್ ಪ್ಲಾಟ್‌ಫಾರ್ಮ್‌ವತಿಯಿಂದ ರೈತರಿಗೆ `ಭೂಮಿ’ ಪ್ರಶಸ್ತಿ ನೀಡಲಾಗುತ್ತಿದ್ದು ಆಸಕ್ತ ರೈತರು ಅರ್ಜಿ ಸಲ್ಲಿಸಬಹುದು ಎಂದು ವೇದಿಕೆಯ ಸಂಸ್ಥಾಪಕ ಕಾರ್ಯನಿರ್ವಹ ಣಾಧಿಕಾರಿ ರಘುನಂದನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು, ಯುವಕರು, ಸಾವಯವ ಕೃಷಿ, ಅಧಿಕ ಇಳುವರಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರಾಜ್ಯದ 300 ರೈತರಿಗೆ ಪ್ರಶಸ್ತಿ ನೀಡಲಾಗುವುದು ಎಂದರು.

ಆಸಕ್ತ ರೈತರು ಪ್ರಶಸ್ತಿಗಾಗಿ ಇದೇ ದಿನಾಂಕ 12ವರೆಗೆ  ಅರ್ಜಿ ಸಲ್ಲಿಸಬಹು ದಾಗಿದು. ವಿವರಕ್ಕೆ ಉಷಾ (90350 12493) ಅವರನ್ನು ಸಂಪರ್ಕಿಸಬಹುದು ಎಂದರು. ಸಂಸ್ಥೆಯ ಪ್ರಮುಖ ಹನುಮೇಶ್ ಯಾವಗಲ್ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!