ನಗರದಲ್ಲಿ ಇಂದು ಶರಣ ಸಾಹಿತ್ಯ ಪರಿಷತ್ತಿನಿಂದ ಉಪನ್ಯಾಸ

ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕ ಮತ್ತು ಶ್ರೀ ಧರ್ಮಪ್ರಕಾಶ ಜಾಲಿಮರದ ವಿರೂಪಾಕ್ಷಪ್ಪ ಸರ್ಕಾರಿ ಪ್ರೌಢಶಾಲೆ ಇವರುಗಳ ಸಹಯೋಗದಲ್ಲಿ ಇಂದು ಮಧ್ಯಾಹ್ನ 3.30ಕ್ಕೆ ಶ್ರೀಮತಿ ಕಾವೇರಮ್ಮ ಶಾಲೆ ಆವರಣ ದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದತ್ತಿ ಉಪನ್ಯಾಸ: ಲಿಂ|| ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿಯ ದಾನಿಗಳು  ಚಿಂದೋಡಿ ಚಂದ್ರಧರ ಮತ್ತು ಲಿಂ|| ಗೌರಮ್ಮ ವೀರಭದ್ರಯ್ಯ ಹಂಜಗಿಮಠ ದತ್ತಿಯ ದಾನಿಗಳು ಲಿಂ|| ಹೆಚ್‌.ಎಂ. ಮಹಾರುದ್ರಯ್ಯನವರ ಮಕ್ಕಳು.

ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಎಂ. ಪರಮೇಶ್ವರಪ್ಪ ಸಿರಿಗೆರೆ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಕ.ಸಾ.ಪ.ದ ನಿಕಟಪೂರ್ವ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ ಅವರು `ಶರಣ ಸಾಹಿತ್ಯದಲ್ಲಿ ಸಾಮಾ ಜಿಕ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯ ಎಸ್‌.ಪಿ.ಚಂದ್ರಪ್ಪ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ಘಟಕದ ಗೌರವಾಧ್ಯಕ್ಷ ಎಂ.ಎಸ್‌.ನಾಗರಾಜಪ್ಪ, ಉಪಾಧ್ಯಕ್ಷ ಬುಳ್ಳಾಪುರದ ಮಲ್ಲಿಕಾರ್ಜುನಪ್ಪ, ಸದಸ್ಯರು ಹಾಗೂ ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ರೇಖಾ ಓಂಕಾರಪ್ಪ ಅವರುಗಳು ಉಪಸ್ಥಿತರಿರುವರು.

error: Content is protected !!