ನಗರದಲ್ಲಿ ಇಂದು ಶಿವಸಿಂಪಿ ಸಮಾಜದಿಂದ ರಾಜ್ಯೋತ್ಸವ, ಸಾಧಕರಿಗೆ ಸನ್ಮಾನ

ದಾವಣಗೆರೆ, ನ. 29-  ಶಿವಸಿಂಪಿ ಸಮಾಜದ ವತಿಯಿಂದ ನಾಳೆ ದಿನಾಂಕ 30 ರಂದು ಸಂಜೆ 5 ಗಂಟೆಗೆ ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ, ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಚಿಂದೋಡಿ ಎಲ್. ಚಂದ್ರಧರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬನಹಟ್ಟಿ ಮಹಾಂತ ಮಂದಾರ ಮಠದ ಶ್ರೀ ಮಹಾಂತ ದೇವರು ಸಾನ್ನಿಧ್ಯ ವಹಿಸುವರು. ಚಂದೋಡಿ ಚಂದ್ರಧರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮತ್ತಿತರರು ಭಾಗವಹಿಸ ಲಿದ್ದಾರೆ. ಇದೇ ವೇಳೆ ಮುಧೋಳ್ ಬಾಪೂಜಿ ಬ್ಯಾಂಕ್  ಜನರಲ್ ಮ್ಯಾನೇಜರ್ ಬಸವರಾಜ್ ಉತ್ತಂಗಿ, ನಗರಸಭೆ ಮಾಜಿ ಸದಸ್ಯೆ ಗೀತಾ ಮುರುಗೇಶ್, ಮಠ ಮಾರ್ಗದರ್ಶನ ಸಂಪಾದಕ ಸಂತೋಷ್ ದಾವಣಗೆರೆ ಇವ ರನ್ನು ಸನ್ಮಾನಿಸಿ, ಗೌರವಿಸಲಾಗುವುದು ಎಂದರು.

ಸಮಾಜದ ಗುರುಗಳಾದ ಶಿವದಾಸಿ ಮಯ್ಯ, ಅವರ ಕುರುಹು ಕ್ರೋಢೀಕರಿಸಿ ಸಂಶೋಧನಾ ಕೇಂದ್ರಕ್ಕೆ ನೀಡಲಾಗಿದೆ. ಶೀಘ್ರದಲ್ಲಿಯೇ ಸಂಶೋಧನಾ ಗ್ರಂಥ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿ.ವಿ. ಮಹೇಶ್ವರ್, ಹೆಚ್.ಎಂ. ನಾಗರಾಜ್, ಗುರುಬಸಪ್ಪ ಬೂಸ್ನೂರು, ಹೆಚ್.ಕೆ. ಹೇಮಣ್ಣ, ಕೆ. ಜಗದೀಶಪ್ಪ ಬಾವಿಕಟ್ಟೆ, ಜ್ಞಾನೇಶ್ವರ ಜವಳಿ, ಹೆಚ್.ಸಿ. ತೀರ್ಥರಾಜ್ ಉಪಸ್ಥಿತರಿದ್ದರು. 

error: Content is protected !!