ದಾವಣಗೆರೆ ಜಿಲ್ಲಾಡಳಿತ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಂದು ಸಂಜೆ 5.30ಕ್ಕೆ ಗಾಜಿನ ಮನೆಯಲ್ಲಿ ಸುವರ್ಣ ಸಂಭ್ರಮ ನಡೆಯಲಿದೆ. ಇಂದು ಶೃತಿ ಮತ್ತು ಸಂಗಡಿಗರಿಂದ ಲಂಬಾಣಿ ನೃತ್ಯ, ಅದಮ್ಯ ಕಲಾ ಸಂಸ್ಥೆಯಿಂದ ವಾದ್ಯ ಸಂಗೀತ, ಪರಶುರಾಮ್ ಸಂಗಡಿ ಗರಿಂದ ಜಾನಪದ ಸಂಗೀತ ಕಾರ್ಯಕ್ರಮ ಏರ್ಪಾಡಾಗಿದೆ. ನಾಳೆ ಶನಿವಾರ ಚಿರಂತನ ಅಕಾಡೆಮಿಯಿಂದ ನೃತ್ಯ ರೂಪಕ, ಸವಿತಾ ಗಣೇಶ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
January 10, 2025