ಪ್ರತಿಯೊಬ್ಬರೂ ದೇಶದ ಕಾನೂನು ತಿಳಿದಿರಬೇಕು : ಶ್ರೀರಾಮ್ ಹೆಗಡೆ

ದಾವಣಗೆರೆ, ನ.24- ದೇಶದಲ್ಲಿ ಬದುಕುವ ಪ್ರತಿಯೊಬ್ಬರೂ ದೇಶದ ಕಾನೂನುಗಳನ್ನು ತಿಳಿದಿರಬೇಕು ಎಂದು ನ್ಯಾಯಾಧೀಶ ಶ್ರೀರಾಮ್ ಹೆಗಡೆ ತಿಳಿಸಿದರು.

ನಗರದ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ `ಮಕ್ಕಳಿಗಾಗಿ ಕಾನೂನು ಅರಿವು-ನೆರವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣವರ್‌ ಮಾತನಾಡಿ, ಸಂವಿ ಧಾನವು ದೇಶವನ್ನು ಹೇಗೆ ಮುನ್ನಡೆಸಬೇಕೆಂದು ತಿಳಿಸುತ್ತದೆ ಎಂದು ಹೇಳಿದರು. ಬಾಲ ನ್ಯಾಯಂಗ ಮಂಡಳಿಯಡಿ ಅನಾಥ ಮಕ್ಕಳಿಗೆ ರಕ್ಷಣೆ ನೀಡುವ ಶಿಕ್ಷಣ ಒದಗಿಸಿಕೊಡುವ ಬಗ್ಗೆ ಮಾಹಿತಿ  ಹಾಗೂ ಪೋಕ್ಸೋ ಕಾಯಿದೆಯ ಮಾಹಿತಿ ನೀಡಿದರು.

ಈ ವೇಳೆ ಸಿ.ಆರ್.ಪಿ .ಮಂಜಾನಾಯಕ್, ಶಾಲೆಯ ಮುಖ್ಯಶಿಕ್ಷಕಿ ಸುಗುಣ, ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.

error: Content is protected !!