ನಗರದಲ್ಲಿ ಇಂದು ಆನಂದಕಂದರ ನಲ್ವಾಡುಗಳು ಮಂಥನ – ಗಾಯನ

ಎ.ವಿ. ಕಮಲಮ್ಮ ಕಾಲೇಜಿನಲ್ಲಿ ಇಂದು ಬೆಳಗ್ಗೆ 11 ಕ್ಕೆ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌, ಬೆಳಗಾವಿ ಮತ್ತು ಬಾಪೂಜಿ ವಿದ್ಯಾಸಂಸ್ಥೆಯ ಎ.ವಿ.ಕೆ. ಮಹಿಳಾ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ ಆನಂದಕಂದರ ನಲ್ವಾಡುಗಳು ಮಂಥನ ಮತ್ತು ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ಉದ್ಘಾಟನೆ: ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌, ಬೆಳಗಾವಿ ಅಧ್ಯಕ್ಷರಾದ ರಾಘವೇಂದ್ರ ಪಾಟೀಲ ನೆರವೇರಿಸಲಿದ್ದಾರೆ. ಎ.ವಿ.ಕೆ. ಕಾಲೇಜಿನ ಪ್ರಾಚಾರ್ಯ ಕಮಲಾ ಸೊಪ್ಪಿನ್‌ ಅಧ್ಯಕ್ಷತೆ ವಹಿಸುವರು.

ಆನಂದಕಂದರ ನಲ್ವಾಡುಗಳು ಮಂಥನ ಕಾರ್ಯಕ್ರಮವನ್ನು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ನ ಡಾ. ಸಿ.ಕೆ. ನಾವಲಗಿ ನಡೆಸಿಕೊಡಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಪತ್ರಕರ್ತ ಬಾ.ಮ. ಬಸವರಾಜಯ್ಯ, ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ನ ಶ್ರೀಮತಿ ವಿದ್ಯಾವತಿ ಭಜಂತ್ರಿ, ಬೆಳಗಾವಿಯ ಡಾ. ಸರಜೂ ಕಾಟ್ಕರ್‌, ಮೈಸೂರಿನ ಡಾ. ಅರವಿಂದ ಮಾಲಗತ್ತಿ, ಗೋಕಾಕ್‌ನ ಡಾ. ಸಿ.ಕೆ.  ನಾವಲಗಿ, ಗದಗನ ಚಂದ್ರಶೇಖರ ವಸ್ತ್ರದ, ಬೆಳಗಾವಿ ಬಸವರಾಜ ಜಗಜಂಪಿ, ಹಾವೇರಿಯ ಸತೀಶ ಕುಲಕರ್ಣಿ ಇರುವರು.

error: Content is protected !!