ಹಳ್ಳಿ ಮಹಾದೇವಪ್ಪ ಶಾಲೆಯಲ್ಲಿ ಇಂದು ಬೆಳಿಗ್ಗೆ 10 ಕ್ಕೆ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತ ವಿಕಾಸ ಪರಿಷದ್ ಗೌತಮಿ ಶಾಖೆ ದಾವಣಗೆರೆ ಯಿಂದ ಶಾಲೆಗೆ ಸ್ಮಾರ್ಟ್ ಟಿ.ವಿ. ವಿತರಿಸಲಾಗುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ವಿಕಾಸ ಪರಿಷದ್, ಗೌತಮ ಶಾಖೆ, ದಾವಣಗೆರೆ ಅಧ್ಯಕ್ಷ ಅಜ್ಜಂಪುರ ಶೆಟ್ರು ವಿಜಯಕುಮಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಭಾರತ ವಿಕಾಸ ಪರಿಷದ್ ಸಹ ಕಾರ್ಯದರ್ಶಿ ಅರುಣ್ ಜೆ. ಘಾಟ್ಗೆ, ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್, ಕಾರ್ಯದರ್ಶಿ ಎಂ.ಆರ್. ಮಧುಕರ್, ಕೋಶಾಧ್ಯಕ್ಷರಾದ ಶ್ರೀಮತಿ ವೀಣಾ ಎಂ.ಜಿ. ಇರುವರು. ದಾನಿ ಜಯಪ್ರಕಾಶ್ ಮಾಗಿ ಹಾಜರಿರುವರು.