ಶ್ರೀ ಹನುಮ ಭೀಮ ಮಧ್ವ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹನುಮ-ಭೀಮ-ಮಧ್ವಾಂತರ್ಗತ ಶ್ರೀ ರಾಮಕೃಷ್ಣ ವೇದವ್ಯಾಸರ ಪುಣ್ಯಕ್ಷೇತ್ರ ಕಡಲಬಾಳು ಗ್ರಾಮದ ಶ್ರೀ ಮಧ್ವಾಂಜನೇಯ ಸ್ವಾಮಿಗೆ ನಿತ್ಯ ನೈವೇದ್ಯವನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ನೈವೇದ್ಯ ಸೇವಾದ ಹದಿನಾರನೇ ವಾರ್ಷಿಕೋತ್ಸವದ ನಿಮಿತ್ತ ಇಂದು ಧಾತ್ರೀ ಹವನ ಮಹೋತ್ಸವ ನಡೆಯಲಿದೆ.
ಇಂದು ಬೆಳಿಗ್ಗೆ 7 ರಿಂದ 8 ರವರೆಗೆ ನಿರ್ಮಾಲ್ಯ ವಿಸರ್ಜನೆ ಹಾಗೂ ಪಂಚಾಮೃತ ಅಭಿಷೇಕ, ಬೆಳಿಗ್ಗೆ 8 ರಿಂದ 9.30ರವರೆಗೆ ವಾಯುಸ್ತುತಿ ಪುನಶ್ಚರಣ (ವಿಶ್ವಮಾಧ್ವ ಮಹಾಪರಿಷತ್ ಇವರಿಂದ) ಬೆಳಿಗ್ಗೆ 9.30 ರಿಂದ 11.30ರವರೆಗೆ `ಧಾತ್ರೀಹವನ ಪೂರ್ಣಾಹುತಿ’ ವೇ|| ಕಡೂರು ಪ್ರಾಣೇಶಾಚಾರ್ ಅವರಿಂದ ಬೆಳಿಗ್ಗೆ 11.30 ರಿಂದ 12.30ರವರೆಗೆ ಭಾರತಿ ಭಜನಾ ಮಂಡಳಿ ಹಾಗೂ ನಂದಕಿಶೋರ ಭಜನಾ ಮಂಡಳಿ, ದಾವಣಗೆರೆ ಮತ್ತು ರಾಘವೇಂದ್ರ ಭಜನಾ ಮಂಡಳಿ, ಚಂದ್ರಿಕಾ ಭಜನಾ ಮಂಡಳಿ, ಹರಿಹರ ಇವರುಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.